Home » ಎಕ್ಸಲೆಂಟ್ : ದಸರಾ ಉತ್ಸವದ ನವದುರ್ಗಾ ಆಚರಣೆ
 

ಎಕ್ಸಲೆಂಟ್ : ದಸರಾ ಉತ್ಸವದ ನವದುರ್ಗಾ ಆಚರಣೆ

by Kundapur Xpress
Spread the love

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕರಾವಳಿ ಕಡಲ ತಡಿಯ ಭಾರ್ಗವ ರಾಮರ ಸುಂದರ ಹಸಿರು ನಾಡಿನ ಸುಣ್ಣಾರಿ ಎನ್ನುವ ಸುಂದರ ಊರಿನಲ್ಲಿ ಸ್ಥಾಪಿತಗೊಂಡಿರುವ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸಾಧಿಸಿರುವ ಅಗ್ರಗಣ್ಯ ಸಂಸ್ಥೆಯೇ ಎಕ್ಸಲೆಂಟ್ ವಿದ್ಯಾಸಂಸ್ಥೆಯಾಗಿದೆ.

ಈ ಸಂಸ್ಥೆಗೆ ಪ್ರತಿ ವರ್ಷವು ವಿವಿಧ ರಾಜ್ಯದ ಹಾಗೂ ಜಿಲ್ಲೆಗಳ ನಾನಾ ಭಾಗದ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹೊಸ ಕ್ರಾಂತಿಯನ್ನು ಸೃಷ್ಠಿಸಿದೆ.ಪ್ರತಿ ವರ್ಷವು ಸಿಇಟಿ, ಜೆಇಇ, ನೀಟ್, ಸಿಎ, ಸಿಎಸ್ ಹಾಗೂ ಬೋರ್ಡ್‍ಗಳಲ್ಲಿ ಹಲವಾರು ರ್ಯಾಂಕ್‍ಗಳನ್ನು ಗಳಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆಯ ಸಂಸ್ಥೆಯಾಗಿದೆ.

ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸಿ ಅದೆಷ್ಟೋ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ಸಂಸ್ಥಗೆ ಹೆಮ್ಮೆಯ ವಿಚಾರವಾಗಿದೆ.ಹೀಗೆ ಶಿಕ್ಷಣ,ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾಂಸ್ಕ್ರತಿಕ ಕ್ರೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಮಾಡಲು ದಾಪುಗಾಲಿಟ್ಟಿದೆ.ಮಕ್ಕಳಲ್ಲಿ ಈ ನಾಡಿನ ಆಚಾರ-ವಿಚಾರ,ಹಿಂದೂ ಧರ್ಮದ ಮಹತ್ವ, ಈ ಧರ್ಮದ ಸಂಸ್ಕತಿ, ಕಲೆ, ಉಡುಗೆ-ತೊಡುಗೆ, ಹಾಗೂ ಸಂಸ್ಕಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ ಆಚರಿಸುವ ವಿವಿಧ ಹಬ್ಬಗಳ ಮಹತ್ವವನ್ನು ತಿಳಿಸಲು ನಮ್ಮ ಸಂಸ್ಥೆಯಲ್ಲಿ ಹಲವಾರು ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಜೊತೆಗೆ ನಾಡಹಬ್ಬಗಳ ಆಚರಣೆಯನ್ನು ಸಾಂಸ್ಕತಿಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಪ್ರತಿವರ್ಷವೂ ಮಾಡುತ್ತಾ ಬಂದಿದ್ದೇವೆ.

ಇಂತಹ ಆಚರಣೆಗಳಲ್ಲಿ ನಮ್ಮ ನಾಡಿನ ನಾಡಹಬ್ಬವಾದ ‘ದಸರಾ ಉತ್ಸವ’ ಹಾಗೂ ‘ನವದುರ್ಗಾ ಪೂಜೆ’ ಇದರ ಆಚರಣೆಯನ್ನು ಎಕ್ಸಲೆಂಟ್ ಸಂಸ್ಥೆಯಲ್ಲಿ ವೈಶಿಷ್ಠ್ಯ ರೀತಿಯಿಂದ ಅದ್ದೂರಿಯಾಗಿ ಒಂಭತ್ತು ದಿನಗಳ ಕಾಲ ವೈವಿಧ್ಯತೆಗಳಿಂದ ವಿವಿಧ ಸಾಂಸ್ಕತಿಕ ಚಟುವಟಿಕೆಗಳ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಎಂ.ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರ ನೇತೃತ್ವದಲ್ಲಿ ಅದ್ದೂರಿಯಾಗಿ ಒಂಭತ್ತು ದಿನಗಳ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಹಬ್ಬವಾದ ದಸರಾ ಉತ್ಸವದ ಮಹತ್ವ,ನವದುರ್ಗಾ ಆಚರಣೆಯ ಮಹತ್ವ ಹಾಗೂ ಸನಾತನ ಹಿಂದೂಧರ್ಮದ ಮಹತ್ವದಲ್ಲಿ ಆಯುಧ ಪೂಜೆಯ ಮಹತ್ವವನ್ನು ಶ್ರೀರಾಮನಕಥೆ ಹಾಗೂ ಪಾಂಡವರ ಅಜ್ಞಾತವಾಸದ ಕಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿ ಶುಭ ಹಾರೈಸಿದರು.ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ನಾಡ ಹಬ್ಬದ ವೈಶಿಷ್ಠ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಪ್ರತಿ ದಿನವೂ ಆಯಾಯ ದಿನಗಳ ಮಹತ್ವ ಹಾಗೂ ನಮ್ಮ ಸಂಸ್ಕತಿಯನ್ನು ಬಿಂಬಿಸುವ ಸುಂದರ ಕಾರ್ಯಕ್ರವನ್ನು ನಡೆಸಿಕೊಡುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿಯಾದ ಸರೋಜಿನಿ ಆಚಾರ್ಯರವರು ನಾಡ ಹಬ್ಬದ ವೈಶಿಷ್ಠ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ,ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಹೀಗೆ ಪ್ರತಿ ಒಂದೊಂದು ದಿನದ ಕಾರ್ಯಕ್ರಮಕ್ಕೆ ಒಂದೊಂದು ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ವಿಶಿಷ್ಠ ರೀತಿಯಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಆಚರಿಸಿದರು.

ಪ್ರತಿ ದಿನವೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಆ ದಿನದ ದುರ್ಗೆಯ ಮಹತ್ವವನ್ನು ಆ ದಿನದ ಉಡುಗೆ-ತೊಡುಗೆಗಳೊಂದಿಗೆ ವಿಭಿನ್ನ ರೀತಿಯಲ್ಲಿ ನವದುರ್ಗಾ ಆಚರಣೆಯನ್ನು ಸಂಗೀತ,ನೃತ್ಯ,ನೃತ್ಯರೂಪಕ,ಪ್ರಹಸನ, ನಾಟಕ,ಯಕ್ಷಗಾನ ಈ ರೀತಿಯ ವೈವಿಧ್ಯತೆಗಳಿಂದ ಕಾರ್ಯಕ್ರಮವನ್ನು ಚಂದಗಾಣಿಸಿದರು.ಪ್ರತಿ ದಿನವೂ ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು,ಮುಖ್ಯಶಿಕ್ಷಕಿ,ಉಪನ್ಯಾಸಕ ವೃಂದದವರು,ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಆ ದಿನದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಾರ್ಯಕ್ರಮದ ಮೆರುಗನ್ನು ಉತ್ತುಂಗಕ್ಕೇರಿಸಿದರು.

ಹೀಗೆ ಪ್ರತಿದಿನವು ಸಾಂಗವಾಗಿ ಮೂಡಿಬಂದ ಈ ಕಾರ್ಯಕ್ರಮವು ನವರಾತ್ರಿಯ ನವದುರ್ಗೆಯ ಕೊನೆಯ ದಿನವಾದ ಶುಭದಿನದಂದು ಅದ್ದೂರಿಯಾಗಿ ಆಯೋಜಿಸಲಾಯಿತು.ಸತತ ಒಂಭತ್ತು ದಿನಗಳ ಕಾಲ ನಡೆದ ಪ್ರತಿ ತರಗತಿಯ ಸಾಂಸ್ಕತಿಕ ಕಾರ್ಯಕ್ರಮವನ್ನು ಭಾಷಾ ಉಪನ್ಯಾಸಕ ತೀರ್ಪುಗಾರರು ಆಯಾಯ ಕಾರ್ಯಕ್ರಮವನ್ನು ನೋಡಿ ಅದರಲ್ಲಿ ಸುಂದರವಾಗಿ ಮೂಡಿಬಂದ ಕಾರ್ಯಕ್ರಮವನ್ನು ಗುರುತಿಸಿ ಸಂಸ್ಥೆಯ ಅಧ್ಯಕ್ಷರ ಹಾಗೂ ಪ್ರಾಂಶುಪಾಲರ ಸಮ್ಮುಖದಲ್ಲಿ ವಿಶೇಷ ಬಹುಮಾನವನ್ನು ನೀಡಿ ಈ ದಸರಾ ಉತ್ಸವ ಹಾಗೂ ನವದುರ್ಗಾ ಆಚರಣೆಯನ್ನು ಎಕ್ಸಲೆಂಟ್ ಸಂಸ್ಥೆಯ ಸುಂದರ ವೇದಿಕೆಯಲ್ಲಿ ಅದ್ಬುತವಾಗಿ ಎಲ್ಲರ ಸಮ್ಮುಖದಲ್ಲಿ ಸಂಪನ್ನಗೊಳಿಸಲಾಯಿತು.

   

Related Articles

error: Content is protected !!