ಕುಂದಾಪುರ : ನವರಾತ್ರಿ ಪ್ರಯುಕ್ತ ಇಲ್ಲಿನ ಕಲಾಕ್ಷೇತ್ರ ಸಂಸ್ಥೆ ಗುರುವಾರ ಸಂಜೆ ಬೋರ್ಡ್ ಹೈಸ್ಕೂಲು ಮೈದಾನದಲ್ಲಿ ಕುಂದಾಪ್ರ ಸಾಂಪ್ರದಾಯಿಕ ಹುಲಿವೇಷ ತಂಡಗಳ ನೃತ್ಯ ಪ್ರದರ್ಶನವನ್ನು ಆಯೋಜಿಸಿತು
ಧಾರ್ಮಿಕ ಹಿನ್ನೆಲೆಯ ವೈಶಿಷ್ಟ್ಯಪೂರ್ಣ ಹೆಜ್ಜೆಗಾರಿಕೆ,ಹಾವ ಭಾವ ಮತ್ತು ಅಬ್ಬರ ನೆರೆದ ಪ್ರೇಕ್ಷಕರನ್ನು ಎದ್ದು ಕುಣಿಯುವಂತೆ ಗಮನ ಸೆಳೆಯಿತು
ಕಲಾಕ್ಷೇತ್ರ ಸಂಸ್ಥೆಯ ಅಧ್ಯಕ್ಷ ಕಿಶೋರ್ ಮಾತನಾಡಿ ಕಳೆದ ದಶಕದಿಂದ ಕುಂದಾಪುರ ಹುಲಿವೇಷ ನೃತ್ಯ ಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿದ್ದು,ಅಳಿವಿ ನಂಚಿನಲ್ಲಿರುವ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಪ್ರೋತ್ಸಾಹಿಸ ಬೇಕು ಎಂದರು.
ಉದ್ಯಮಿ ರಾಜೀವ ಕೋಟ್ಯಾನ್ ಗೊಂಡೆಗೆ ಶಾಲು ಕಟ್ಟುವ ಮೂಲಕ ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡಿದರು.ಕಲಾಕ್ಷೇತ್ರ ಸಂಸ್ಥೆಯ ಮತ್ತು ಗೀತಗಾಯನ ತಂಡದ ಸದಸ್ಯರು ಉಪಸ್ಥಿತರಿದ್ದರು.ಕುಂದಾಪುರದ ಹಳೆಯ ಸಾಂಪ್ರದಾಯಿಕ ಹುಲಿವೇಷ ತಂಡ ಲಿಂಗುಮನೆ ತಂಡದ ಸದಸ್ಯರು ನೃತ್ಯದ ಮೆರುಗು ಹೆಚ್ಚಿಸಿದರು.ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.