Home » ಇಂದು ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ
 

ಇಂದು ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ

by Kundapur Xpress
Spread the love

ಮೈಸೂರು : ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವು ವಿಜಯ ದಶಮಿಯಂದು ಲಕ್ಷಾಂತರ ಜನರ ಕಾತುರ ಕುತೂಹಲದಿಂದ ಕಾಯುತ್ತಿರುವ ನಾಡಿನ ಪರಂಪರೆ, ಸಂಸ್ಕೃತಿ, ಪ್ರವಾಸೋದ್ಯಮ, ವೈವಿಧ್ಯತೆಗಳನ್ನು ಹೊತ್ತ ಐತಿಹಾಸಿಕ ಜಂಬೂಸವಾರಿ ವಿಜೃಂಭಣೆಯಿಂದ ಅದ್ದೂರಿಯಾಗಿ ಇಂದು ಜರುಗಲಿದೆ.ಇದಕ್ಕಾಗಿ ಸಕಲ ಸಿದ್ಧತಾ ಕಾರ್ಯಗಳನ್ನು ಮಾಡಿಕೊಳ್ಳಲಾಗಿದೆ.ದಸರಾದ ಎಲ್ಲಾ ಕಾರ್ಯಕ್ರಮಗಳು ಮುಕ್ತಾಯಗೊಂಡುಕೊನೆ ದಿನವಾದ ಶನಿವಾರ ಜಂಬೂಸವಾರಿ ಮೆರವಣಿಗೆ ರಾಜಬೀದಿಯಲ್ಲಿ ನಡೆಯಲಿದೆ.

ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದ ಬಳಿಗೆ ಸಚಿವರು,ಶಾಸಕರೊಂದಿಗೆ ಅಂದು ಮಧ್ಯಾಹ್ನ 1.40 ಕ್ಕೆ ಆಗಮಿಸುವ ಮುಖ್ಯಮಂತ್ರಿಗಳು 1.41 ರಿಂದ 2.10ರ ವರೆಗಿನ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಿ ನಾಡಿನ ಜನರಿಗೆ ಸಂದೇಶವನ್ನು ನೀಡಲಿದ್ದಾರೆ.

ಆ ಬಳಿಕ ಒಂದೊಂದಾಗಿ ಜಾನಪದ ಕಲಾತಂಡಗಳು ಸ್ತಬ್ಧ ಚಿತ್ರಗಳು ಹೊರಡಲಿವೆ.ಈ ಬಾರಿ ಅತಿ ಹೆಚ್ಚಾಗಿ ಸ್ತಬ್ದ ಚಿತ್ರಗಳು ಭಾಗವಹಿಸುತ್ತಿವೆ.ಕಳೆದ 6 ವರ್ಷಗಳಿಂದ ಭಾಗವಹಿಸುತ್ತಿರುವ ಯಾವುದೇ ಸ್ತಬ್ದ ಚಿತ್ರಗಳು ಪುನರಾವರ್ತನೆಯಾಗದಂತೆ ಈ ಬಾರಿ ಮುನ್ನೆಚ್ಚರಿಕೆ ವಹಿಸಿ ಹೊಸ ತರಹದ ಸ್ತಬ್ಧ ಚಿತ್ರಗಳನ್ನು ನಿರ್ಮಿಸಲಾಗಿದ್ದು,ಇದೇ ಮೊದಲಬಾರಿಗೆ ಸಿಎಫ್‌ ಟಿಐಆರ್, ಮೈಸೂರು ಸಿಲ್ಕ್, ಸೋಪು, ರೈಲ್ವೆ ಶ್ರವಣ ಸಂಸ್ಥೆ,ಜಂಗಲ್ ಲಾಡ್ಜ್‌ಗೆ ಸೇರಿದ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತಿವೆ.

ಬಿಗಿ ಪೊಲೀಸ್ ಬಂದೋಬಸ್ತ್

ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದ್ಯಾಂತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳ ಕಣ್ಣಾವಲು,ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ,ಚಾಮುಂಡಿ ದಳ,ಶ್ವಾನದಳ,ಉಗ್ರ ನಿಗ್ರಹದಳ ಸೇರಿದಂತೆ ಇಡೀ ಪೊಲೀಸ್ ಕಣ್ಣಾವಲು ಇರಲಿದೆ. ಇದಕ್ಕಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

   

Related Articles

error: Content is protected !!