Home » ವಕ್ಫ್ ಆಸ್ತಿ ಜಮೀರ್ ಅಪ್ಪನ ಆಸ್ತಿಯಲ್ಲ
 

ವಕ್ಫ್ ಆಸ್ತಿ ಜಮೀರ್ ಅಪ್ಪನ ಆಸ್ತಿಯಲ್ಲ

ಜಮೀ‌ರ್ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

by Kundapur Xpress
Spread the love

ಬೆಂಗಳೂರು : ‘ವಕ್ಸ್ ಆಸ್ತಿ ಯಾರಪ್ಪನ ಮನೆಯ ಸ್ವತ್ತಲ್ಲ ಎಂಬ ವಸತಿ ಹಾಗೂ ವಕ್ಸ್ ಸಚಿವ ಜಮೀರ್ ಅಹಮದ್‌ ಹೇಳಿಕೆಗೆ ಮಾಜಿ ಸಚಿವ,ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತೀವ್ರ ಕಿಡಿ ಕಾರಿದ್ದಾರೆ.ಕಂಡ ಕಂಡ ಆಸ್ತಿಯನ್ನೆಲ್ಲ ವಕ್ಸ್ ಆಸ್ತಿ ಮಾಡಿಕೊಳ್ಳಲು ಅದು ಅವರಪ್ಪನ ಮನೆ ಆಸ್ತಿಯಲ್ಲ ಎಂದು ತಿರುಗೇಟು ನೀಡಿದ್ದಾರೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಸ್ ಆಸ್ತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಿರುದ್ಧ ಕಿಡಿಕಾರಿದ್ದ ಜಮೀರ್ ಅಹಮದ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಮೀರ್ ಅಹಮದ್ ಅವರು ಯತ್ನಾಳ್ ವಿರುದ್ಧ ದುರಹಂಕಾರದ ಮಾತು ಆಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಇದೇ ವೇಳೆ ದಾವಣಗೆರೆ,ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿದ್ದಾರೆ.ವ್ಯವಸ್ಥಿತ ಜಾಲವೇ ದೇಶದ ಉದ್ದಗಲಕ್ಕೂ ಹರಡಿಕೊಂಡಿದೆ.ಇದರಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಾಗಲಿದೆ

ಭಯೋತ್ಪಾದಕರು ದೇಶದಲ್ಲಿ ಸುಲಭವಾಗಿ ನುಸುಳಬಹುದು.ಇವರಿಗೆಲ್ಲ ಪಾಸ್‌ಪೋರ್ಟ್ ಹೇಗೆ ಸಿಗುತ್ತದೆಂಬುದೇ ಯಕ್ಷ ಪ್ರಶ್ನೆ ಎಂದರು.ತಮ್ಮ ಮೇಲೆ ಬಂದಿರುವ ಮುಡಾ ನಿವೇಶನದ ಹಗರಣ ಕಳಂಕ ಮರೆ ಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮುನ್ನಲೆಗೆ ತರಲು ಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

   

Related Articles

error: Content is protected !!