Home » ಶ್ರೀ ರಕ್ತೇಶ್ವರಿ ಅಮ್ಮನವರ ದೇಗುಲದಲ್ಲಿ ಶರನ್ನವರಾತ್ರಿ ಮಹೋತ್ಸವ
 

ಶ್ರೀ ರಕ್ತೇಶ್ವರಿ ಅಮ್ಮನವರ ದೇಗುಲದಲ್ಲಿ ಶರನ್ನವರಾತ್ರಿ ಮಹೋತ್ಸವ

by Kundapur Xpress
Spread the love

ಕೋಟ : ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ಶ್ರೀ ಮಹಿಷಮರ್ಧಿನಿ ಅಮ್ಮನವರ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಒಂಭತ್ತು ದಿನದ ದೇವತಾ ಪಾರಾಯಣ ಹೋಮ ಹವನಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ವಿಜಯ ದಶಮಿಯ ಶುಭ ಪುಣ್ಯ ಪರ್ವ ಕಾಲದಲ್ಲಿ ಚಂಡಿಕಾಯಾಗ ಸಂಪನ್ನವಾಯಿತು.

ಸೇವಾಕರ್ತರಾದ ಪಿ.ಸಂದೀಪ್ ಚಡಗ ದಂಪತಿಗಳು ಸಂಕಲ್ಪ ಪೂಜೆ ನಡೆಸಿಕೊಟ್ಟರು. ತೀರ್ಥಬೈಲ್ ರಾಮಕೃಷ್ಣ ಅಡಿಗರ ನೇತ್ರತ್ವದಲ್ಲಿ ಚಮಡಿಕಾ ಹೋಮ ನೆರವೇರಿತು. ಸಾ.ಸಾಂ.ಧಾ.ಸೇವ ಸಂಘದ ಅಧ್ಯಕ್ಷ ಪಿ.ರಾಮಕೃಷ್ಣ ಚಡಗ,ಕಾರ್ಯದರ್ಶಿ ಗಣೇಶ ಚಡಗ,ಖಜಾಂಜಿ ಪಿ.ಚಂದ್ರಶೇಖರ ಚಡಗ, ಪಾಮರ ಚಡಗ ಉಪಸ್ಥಿತರಿದ್ದರು.

ಚಡಗ ಕುಟುಂಬದ ಅತ್ಯಂತ ಹಿರಿಯರಾದ 92 ವರ್ಷದ ನಿವೃತ್ತ ಪೆÇೀಸ್ಟ್ ಮಾಸ್ಟರ್ ಪಿ.ಸದಾಶಿವ ಚಡಗ ಹೋಮದಲ್ಲಿ ಭಾಗಿಯಾಗಿ ಸೇರಿದ ಎಲ್ಲರನ್ನೂ ಹರಸಿ ಹಾರೈಸಿದರು.

   

Related Articles

error: Content is protected !!