Home » ದಸರಾ ಕ್ರೀಡಾಕೂಟ ಕಾರ್ಯಕ್ರಮ
 

ದಸರಾ ಕ್ರೀಡಾಕೂಟ ಕಾರ್ಯಕ್ರಮ

ಕುಂಭಾಸಿ - ದ್ರಾವಿಡ ಬ್ರಾಹ್ಮಣ ಪರಿಷತ್ ವಲಯ

by Kundapur Xpress
Spread the love

ಕೋಟ : ಕ್ರೀಡೆ ಮನಸ್ಸಿನ ವ್ಯಾಕುಲತೆನ್ನು ದೂರಗೊಳಿಸಿ ಸಂತೋಷವನ್ನು ಹೆಚ್ಚಿಸುತ್ತದೆ,ದೇಹಕ್ಕೆ ಸಹಜ ವ್ಯಾಯಾಮ ದೊರಕಿಸುತ್ತದೆ ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಶುಭಚಂದ್ರ ಹತ್ವಾರ ನುಡಿದರು.

ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶೃಂಗೇರಿ ಶಾರಾದಾಪೀಠದ ಆಡಳಿತಕ್ಕೆ ಒಳಪಟ್ಟಿರುವ ಕುಂಭಾಸಿ ಶ್ರೀ ನಾಗಾಚಲ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಾನಿಧ್ಯದಲ್ಲಿರುವ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಸಿ ವಲಯ ಆಯೋಜಿಸಿದ ದಸರಾ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಲಗೋರಿ,ಗುಡ್ನ,ಜಿಲಿಬಿಲಿ ಆಟ,ಕಪ್ಪೆ ಜಿಗಿತ,ಒಂಟಿ ಕಾಲಿನ ಓಟ ಹೀಗೆ ಮರೆತ ಹಳೆಯ ಗ್ರಾಮೀಣ ಆಟಗಳನ್ನು ಮತ್ತೆ ನೆನಪಿಸಿಕೊಳ್ಳುವಂತಾಯಿತು, ಗ್ರಾಮೀಣ ಆಟಗಳು ನೀಡುವಷ್ಟು ಖುಷಿ,ಸಂತೋಷ ಬೇರೆ ಆಟಗಳಲಿಲ್ಲ ಎಂದು ತಾಲೂಕಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕುಂಭಾಸಿ ವಲಯದ ಅಧ್ಯಕ್ಷ ರಮೇಶ್ ಚಾತ್ರ ವಹಿಸಿದ್ದರು.
ತಾಲೂಕಿನ ಮಹಿಳಾ ವೇದಿಕೆಯ ಅಧ್ಯಕ್ಷೆ ಸಂಧ್ಯಾ ಉಡುಪ,ವಲಯದ ಗೌರವಾಧ್ಯಕ್ಷ ವಾದಿರಾಜ ಹತ್ವಾರ, ವಲಯದ ಯುವ ವಿಪ್ರ ವೇದಿಕೆಯ ಅಧ್ಯಕ್ಷ ವಾದಿರಾಜ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯದ ಹವ್ಯಾಸಿ ಮಹಿಳಾ ಯಕ್ಷಗಾನ ಕಲಾವಿದೆ ಹಾಗೂ ಭಾಗವತರಾದ ವಂದನಾ ಹೆಬ್ಬಾರ್ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ೧೦ನೇ ಸ್ಥಾನ ಪಡೆದ ವಲಯದ ನಮೃತಾರನ್ನು ಅಭಿನಂದಿಸಲಾಯಿತು.
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಟ್ಟಿಯನ್ನು ಶ್ರೀಧರ ಭಟ್ ಅವರು ವಾಚಿಸಿದರು. ಸುಧಾ ಉಪಾಧ್ಯಾಯ,ಸುಮಾ ವಾಮನ್ ಮತ್ತು ನಿಶ್ಮಿತಾ ಪ್ರಾರ್ಥಿಸಿದರೆ, ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ವೈದ್ಯ ಸ್ವಾಗತಿಸಿದರು. ಮಹಿಳಾ ಅಧ್ಯಕ್ಷೆ ಸುಪ್ರೀತಾ ಪುರಾಣಿಕ ನಿರೂಪಣೆಗೈದರೆ, ಕಾರ್ಯದರ್ಶಿ ರಾಘವೇಂದ್ರ ಪುರಾಣಿಕ ಧನ್ಯವಾದ ಸಮರ್ಪಿಸಿದರು.ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಆಡಳಿತಾಧಿಕಾರಿಗಳು ಮತ್ತು ನಾಗಪಾತ್ರಿಗಳಾದ ಬಡಾಕೆರೆ ಲೋಕೇಶ ಅಡಿಗರ ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ನೆರವೇರಿತು.

   

Related Articles

error: Content is protected !!