ಕೋಟ : ಗುಳ್ಳಾಡಿ-ಬೇಳೂರಿನ ಶಶಿಗೋಳಿ ಅಮ್ಮಚಿಕ್ಕು ಬ್ರಹ್ಮನಂದಿಕೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ೧೩ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಆರಾಧನೋತ್ಸವದ ಸಭಾಕಾರ್ಯಕ್ರಮದ ವೇದಿಕೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಜನಮೆಚ್ಚುಗೆ ಪಡೆದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಕುಸುಮಾಕರ ಶೆಟ್ಟಿ ಯವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಇದೇ ಸಂದರ್ಭದಲ್ಲಿ ಸ್ಥಳಿಯ ಎಲೆಮರೆಯ ಕಾಯಿಯಂತೆ ಅಡಗಿದ್ದ ಸಾಧಕಿ ಗಟ್ಟಿಗಿತ್ತಿ ರಾಧಾಶೀನಾ ಇವರು ಸೂಲಗಿತ್ತಿಯಾಗಿ ನಿರ್ವಹಿಸಿದ ಹಿನ್ನಲ್ಲೆಯಲ್ಲಿ ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ತಿನ ಉಡುಪಿ ಜಿಲ್ಲಾ ಸಹಕಾರ್ಯದರ್ಶಿ ಸುರೇಂದ್ರ ಕೋಟೇಶ್ವರ ಉದ್ಘಾಟಿಸಿ ಮಾತನಾಡಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳು ಇಂದು ಕಣ್ಮರೆಯಾಗುತ್ತಿದ್ದು ಅದನ್ನು ಇಂತಹ ಕಾರ್ಯಕ್ರಮಗಳ ಮುಖೇನವಾಗಿ ಉಳಿಸಿ ಬೆಳೆಸಬೇಕು ಎನ್ನುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ,ಅಮೃತೇಶ್ವರಿ ರೈಸ್ ಮಿಲ್‌ನ ಮಾಲಕ ಮಹೇಶ್ ಶೆಟ್ಟಿ, ಗುಳ್ಳಾಡಿ ಶಾರದಾಂಬೆಯ ಪ್ರಧಾನ ಅರ್ಚಕ ಶ್ರೀಧರ್ ಅಡಿಗ,ಗೌರವಾಧ್ಯಕ್ಷ ಭಾಸ್ಕರ್ ಗುಳ್ಳಾಡಿ,ಅಧ್ಯಕ್ಷ ಜಿ.ರಾಮ ಉಪಸ್ಥಿತರಿದ್ದರು ಸಮಿತಿಯ ಪ್ರಮುಖರಾದ ವಾಸುದೇವ್ ಕೆ.ಆರ್ ಸ್ವಾಗತಿಸಿ, ಉಪನ್ಯಾಸಕ ನಾಗರಾಜ್ ಗುಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.