Home » 40.ಸೃಷ್ಟಿಶೀಲತೆಯ ಉಗಮಸ್ಥಾನ
 

40.ಸೃಷ್ಟಿಶೀಲತೆಯ ಉಗಮಸ್ಥಾನ

by Kundapur Xpress
Spread the love

40. ಸೃಷ್ಟಿಶೀಲತೆಯ ಉಗಮಸ್ಥಾನ:
ನಾವೀಗ ಜೀವಿಸುತ್ತಿರುವುದೇ ಸದ್ದುಗದ್ದಲಗಳಿಂದ ಕೂಡಿದ ಪ್ರಪಂಚದಲ್ಲಿ. ಆಧುನಿಕ ನಾಗರಿಕ ಬದುಕು ಅತ್ಯಧಿಕ ಶಬ್ದ ಮಾಲಿನ್ಯದಿಂದ ಕೂಡಿದೆ. ವಾಹನಗಳಿಂದ, ಯಂತ್ರೋಪಕರಣಗಳಿಂದ, ಮೈಕಾಸುರನಿಂದ ಆಗುವ ಸದ್ದುಗದ್ದಲ ಅಸಹನೀಯವಾದದ್ದು. ಇದೊಂದು ಅನಿವಾರ್ಯ ಪೀಡೆ ಕೂಡ. ಯಂತ್ರ ಯುಗದಲ್ಲಿ ಜೀವಿಸುತ್ತಿರುವ ನಮಗೆ ಅದು ಕಲ್ಪಿಸಿರುವ ದೈಹಿಕ ಸುಖ – ಭೋಗಗಳು ಅತ್ಯಂತ ಪ್ರಿಯವಷ್ಟೆ? ಹಾಗಿರುವಾಗ ಯಂತ್ರಯುಗದ ಪೀಡೆಗಳೆಲ್ಲವನ್ನೂ ನಾವು ಅನಿವಾರ್ಯವಾಗಿ ಅನುಭವಿಸಲೇಬೇಕು. ಇದೇನಿದ್ದರೂ ಇವೆಲ್ಲವೂ ಬಾಹ್ಯ ಶಬ್ದಮಾಲಿನ್ಯ ನಡೆಯುತ್ತಲೇ ಇರುತ್ತದೆ. ಆದರೆ ನಾವದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ನಮ್ಮ ಮಾನಸಿಕ ಅಸ್ವಾಸ್ಥಕ್ಕೆ, ಹತಾಶಗೆ, ದುಃಖಕ್ಕೆ ಈ ಆಂತರಿಕ ಶಬ್ದಮಾಲಿನ್ಯವೇ ಕಾರಣ. ಇದಕ್ಕೆ ಕಾರಣವಾಗುವ ಅಂಶಗಳೆಂದರೆ ನಮ್ಮ ಆಸೆ – ಆಕಾಂಕ್ಷೆಗಳು, ಲೋಭ, ಮೋಹ, ಮದ ಮತ್ಸರಗಳಲ್ಲದೆ ಬೇರೇನೂ ಅಲ್ಲ. ಇವು ನಿಮಿಷ – ನಿಮಿಷಕ್ಕೂ ಮನಸ್ಸಿನಲ್ಲಿ ಸೃಷ್ಟಿಸುವ ಸದ್ದುಗದ್ದಲ, ಕ್ಷೋಭೆ, ಅನುಪಾತ ಹೊರಗಿನ ಶಬ್ದಮಾಲಿನ್ಯಕ್ಕೆ ಎಷ್ಟು ಮಾತ್ರಕ್ಕೂ ಕಡಿಮೆ ಇಲ್ಲ. ಇದರ ಪೀಡೆಯನ್ನು ನಿವಾರಿಸುವುದು ಮಾತ್ರ ಅತ್ಯಂತ ಕಠಿಣ. ಮನಸ್ಸಿನೊಳಗಿನ ಶಬ್ದಮಾಲಿನ್ಯ ನಿವಾರಣೆಗೆ ಮೌನಧಾರಣೆಯ ಶಿಸ್ತು ತುಂಬಾ ಅಗತ್ಯ. ಮೌನದ ಶಿಸ್ತಿನಲ್ಲಿ ಅಂತರಂಗದ ಶಾಂತಿ ಇದೆ. ಮೌನದ ಶಿಸ್ತಿನಲ್ಲಿ ಮನಸ್ಸಿನ ನಿಶ್ಚಲತೆಯನ್ನು ಸಾಧಿಸಬಹುದು. ಅಷ್ಟೇ ಅಲ್ಲ, ಮನಸ್ಸು ಸ್ವತಃ ಅತ್ಯಂತ ಪ್ರಸನ್ನತೆಯನ್ನು ಪಡೆಯುವ ಸೃಷ್ಟಿಶೀಲ ಸಾಧ್ಯತೆಗಳ ಉಗಮ ಸ್ಥಾನವೇ ಮೌನದಲ್ಲಿ ಅಡಗಿದೆ!.

   

Related Articles

error: Content is protected !!