ಉಡುಪಿ : ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೋಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಲೋಕೇಶ್ವರಿ ಮಹಾಯುಗವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹಾಗೂ ನೇತೃತ್ವದಲ್ಲಿ ನೆರವೇರಿತು
ಪ್ರಾತಕ್ಕಾಲಾ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸುವುದರೊಂದಿಗೆ ಸಾಮೂಹಿಕ ಪ್ರಾರ್ಥನೆಗೆ ಚಾಲನೆ ನೀಡಲಾಯಿತು ಗರ್ಭಗೃಹದಿಂದ ದೇವಿಯ ಉತ್ಸವ ಬಿಂಬವನ್ನು ಕೊಂಬು ಕಹಳೆ ಚಂಡೆ ವಾದ್ಯ ನಾದದೊಂದಿಗೆ ಋತ್ವಿಜರ ವೇದಘೋಷದೊಂದಿಗೆ ಯಾಗ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು.. ಕ್ಷೇತ್ರದ ಯಾಗ ಮಂಟಪದಲ್ಲಿ ಏಕಕಾಲದಲ್ಲಿ ಮೂರು ಯಾಗಗಳು ಸಂಪನ್ನಗೊಂಡವು..
ಒಂದು ಯಾಗವು ಮುಂಬೈಯ ವಿನೋದ್ ಚೆನ್ನ ಅವರಿಂದ ಮತ್ತೊಂದು ಯಾಗ ವಿಜಯ ಶೆಟ್ಟಿ ಮತ್ತು ಮನೆಯವರ ಬಾಪ್ತು ನೆರವೇರಿತು ಏಕಕಾಲದಲ್ಲಿ ಮೂರು ಕುಂಡಗಳಲ್ಲಿ ಯಾಗ ಆರಂಭಗೊಂಡು ಏಕಕಾಲದಲ್ಲಿ ಮೂರು ಕುಂಡಗಳಲ್ಲಿ ಯಾಗ ಪೂರ್ಣಾಹುತಿಗೊಂಡಿತು.
ಕ್ಷೇತ್ರದ ಸಮಸ್ತ ಭಕ್ತರುಗಳ ಪರವಾಗಿ ಸಂಪನ್ನಗೊಂಡ ತ್ರಿಲೋಕೇಶ್ವರಿ ಮಹಾಯಾಗದಲ್ಲಿ ಭಕ್ತರು ಸಾಮೂಹಿಕವಾಗಿ ಚಂಡಿಕಾಯಾಗದ ಸೇವೆ ಸಲ್ಲಿಸಿದರು.. ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಸಮರ್ಪಿಸುವ ದ್ರವ್ಯಗಳಾದ ತಾವರೆ ಎಳ್ಳು ಗುಗ್ಗಳ ಆಗರು ಹಾಲು ಮೊಸರು ಕಲ್ಲು ಸಕ್ಕರೆ ಪಚ್ಚೆ ಕರ್ಪೂರ ಕಬ್ಬು ಬಾಳೆಹಣ್ಣು ತೆಂಗಿನಕಾಯಿ ಬಿಲ್ವಪತ್ರೆ ಹಿಂಗಾರ ಹೂವು ಕೇಪಳದ ಹೂವು ಸೀರೆ ರವಕ ಕಣ ಗಾಜಿನ ಬಳೆಗಳು ಗಂಧ ಅರಶಿನ ಕುಂಕುಮ ಚಿನ್ನ ಬೆಳ್ಳಿಗಳನ್ನು ಭಕ್ತರು ಯಥೇಚ್ಛವಾಗಿ ನೀಡಿದ್ದರು
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸನೆಯರು ಕನ್ನಿಕೆಯರು ಬ್ರಾಹ್ಮಣ ಆರಾಧನೆ ದಾಖಲೆ ಪ್ರಮಾಣದಲ್ಲಿ ನೆರವೇರಿತು..
ತ್ರಿವಿಧ ಪಾಯಸದ ಜೊತೆಗೆ ಪಂಚಭಕ್ಷ ಸಹಿತವಾಗಿ ಅನ್ನಪ್ರಸಾದ 5 ಸಹಸ್ರಕ್ಕೂ ಮಿಕ್ಕಿದ ಭಕ್ತರುಗಳಿಗೆ ಅನ್ನಪ್ರಸಾದ ಬಡಿಸಿ
ಕ್ಷೇತ್ರದ ಮೃಷ್ಟಾನ್ನ ಪ್ರಸಾದ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು..
ಶ್ರೀ ಕ್ಷೇತ್ರದಲ್ಲಿ ಯಜ್ಞ ಯಾಗಾದಿಗಳು ಶಾಸ್ತ್ರ ಬದ್ಧವಾಗಿ ನೆರವೇರುತ್ತಲಿದ್ದು ಕ್ಷೇತ್ರ ಚೈತನ್ಯ ವೃದ್ಧಿಯ ಜೊತೆಗೆ ಜಾಗದಲ್ಲಿ ಪಾಲ್ಗೊಂಡ ಭಕ್ತರುಗಳು ಕ್ಷೇಮ ಕಂಡುಕೊಳ್ಳುತ್ತಿದ್ದಾರೆ ಗತಕಾಲದ ಕ್ಷೇತ್ರ ಪರಂಪರೆಯನ್ನು ಮತ್ತೆ ಮರುಕಳಿಸುವಂತೆ ಈ ತ್ರಿಲೋಕೇಶ್ವರಿಯಾಗ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ