Home » ಪಾಕ್‌ ನೆಲದಲ್ಲೇ ಪಾಕಿಸ್ಥಾನಕ್ಕೆ ಛಾಟಿ ಬೀಸಿದ ಜೈಶಂಕರ್
 

ಪಾಕ್‌ ನೆಲದಲ್ಲೇ ಪಾಕಿಸ್ಥಾನಕ್ಕೆ ಛಾಟಿ ಬೀಸಿದ ಜೈಶಂಕರ್

by Kundapur Xpress
Spread the love

ನವದೆಹಲಿ : ಗಡಿಯಾಚೆಯಿಂದ ಭಾರತದ ವಿರುದ್ಧ ನಿರಂತರ ತಾಂಡವಿಸಿರುವ ಭಯೋತ್ಪಾದನೆ, ತೀವ್ರವಾದ ಮತ್ತು ಪ್ರತ್ಯೇಕತಾವಾದಗಳು ವ್ಯಾಪಾರ, ಇಂಧನ ಪೂರೈಕೆ ಮತ್ತು ಸಂಪರ್ಕಶೀಲತೆಗಳ ಜತೆ ಪರಸ್ಪರ ಜನ ಸಂಪರ್ಕವನ್ನು ಉತ್ತೇಜಿಸುವಲ್ಲಿ ತಡೆಯಾಗಿ ಪರಿಣಮಿಸಿವೆ. ಉಭಯ ರಾಷ್ಟ್ರಗಳ ಮಧ್ಯೆ ಪ್ರಾದೇಶಿಕ ಸಹಕಾರ ಬಾಂಧವ್ಯಗಳಿಗೂ ಇವೇ ಬಲು ದೊಡ್ಡ ಅಡ್ಡಿಯಾಗಿವೆ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪಾಕ್‌ನಲ್ಲಿ ನಡೆದಿರುವ ಎಸ್‌ಸಿಒ ಸಭೆಯಲ್ಲಿ ಹೇಳಿ ಪಾಕ್‌ ನೆಲದಲ್ಲೇ ಪಾಕಿಸ್ಥಾನಕ್ಕೆ ಛಾಟಿ ಬೀಸಿದ್ದಾರೆ

ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಪ್ರಧಾನವಾಗಿ ಆದ್ಯತೆ ನೀಡಬೇಕು. ಹೀಗಾದಲ್ಲಿ ಮಾತ್ರ ವ್ಯಾಪಾರ ಮತ್ತು ಸಂಪರ್ಕ ಉಪಕ್ರಮಗಳು ಅರ್ಥ ಪೂರ್ಣವಾಗುತ್ತವೆ. ಪರಸ್ಪರ ವಿಶ್ವಾಸವೇ ಕಡಿದುಹೋಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಪ್ರಾಮಾಣಿಕವಾದ ಮಾತುಕತೆಗಳು ತೀರಾ ಅಗತ್ಯವೆಂದು ಸಚಿವರು ಪ್ರತಿಪಾದಿಸಿದರು.

 

Related Articles

error: Content is protected !!