ಕೋಟ : ಪಂಚಶಕ್ತಿ ಸಂಘ ಕೋಡಿತಲೆ ಹೊಸ ಬೆಂಗ್ರೆ ಇದರ 2024-25ರ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅನಿಶ ಖಾರ್ವಿಯವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚಿಗೆ ನಡೆದ ಸಂಘದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆಯಲ್ಲಿ ಈ ಪ್ರಕ್ರೀಯೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಪ್ರವೀಣ್ ಡಿ. ಖಾರ್ವಿ, ಕಾರ್ಯದರ್ಶಿಯಾಗಿ ಸಂದೀಪ ಎಸ್. ಖಾರ್ವಿ, ಜೊತೆ ಕಾರ್ಯದರ್ಶಿಯಾಗಿ ವಿಕೇಶ್ ಬಂಗೇರ, ಕೋಶಾಧಿಕಾರಿಯಾಗಿ ಶರತ್ ಖಾರ್ವಿ ಆಯ್ಕೆಯಾದರು, ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಮಡಿ ವಿಶ್ವನಾಥ ಖಾರ್ವಿ, ಸದಸ್ಯರಾದ ಸಂದೀಪ ಬಿ. ಖಾರ್ವಿ, ಅನಿಲ ಖಾರ್ವಿ ಹಾಗೂ ಇತರರು ಉಪಸ್ಥಿತರಿದ್ದರು.