ಬೆಂಗಳೂರು : ಮಳೆ ನಿಂತು ಹೋದ ಮೇಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯಲಿದೆ ಎಂದು ಭಾವಿಸಿದ್ದ ಕ್ರಿಕೆಟ್ ಅಭಿಮಾನಿಗಳು ಗುರುವಾರ ಅಕ್ಷರಶಃ ಶಾಕ್ ಆಗಿದ್ದಾರೆ. ಎರಡು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ನ ಮಜಾ ಅನುಭವಿಸಲು ಬೆಂಗಳೂರಿನ ಕ್ರೀಡಾಂಗಣಕ್ಕೆ ಆಗಮಿಸಿದ್ದ ಪ್ರೇಕ್ಷಕರು ಮಹಾ ಪತನವೊಂದಕ್ಕೆ ಸಾಕ್ಷಿಯಾಗಿದ್ದಾರೆ
ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದು, ಕೇವಲ 46 ರನ್ ಮಾಡಿದ್ದಾರೆ ಈ ಮೂಲಕ ತನ್ನ ಟೆಸ್ಟ್ ಇತಿಹಾಸದಲ್ಲೇ ತವರಿನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾದ ಅಪಖ್ಯಾತಿಗೆ ಭಾರತ ತಂಡ ತುತ್ತಾಗಿದೆ.
ರೋಹಿತ್ ಶರ್ಮಾ ಬಳಗದ ಹೀನಾಯ ಪ್ರದರ್ಶನ ಬಳಿಕ ನ್ಯೂಜಿಲೆಂಡ್ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಆತಿಥೇಯ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ 2ನೇ ದಿನದಂತ್ಯಕ್ಕೆ ಕಿವೀಸ್ ಪಡೆ 3 ವಿಕೆಟ್ಗೆ 180 ರನ್ ಗಳಿಸಿದ್ದು, 134 ರನ್ ಮುನ್ನಡೆ ಪಡೆದಿದೆ