Home » ಕುಂದಾಪುರ ಎಜುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮ
 

ಕುಂದಾಪುರ ಎಜುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮ

ಕನ್ನಡ ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ

by Kundapur Xpress
Spread the love

ಕುಂದಾಪುರ ಪರಿಸರದಲ್ಲಿ ಉತ್ತಮ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಒದಗಿಸಬೇಕು ಎನ್ನುವ ಸದಾಶಯದೊಂದಿಗೆ 1975ರ ವೇಳೆಗೆ ಹುಟ್ಟಿಕೊಂಡ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ. ಕುಂದಾಪುರ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಆರಂಭಗೊಂಡದ್ದು ನರ್ಸರಿ ತರಗತಿಯ ಮೂಲಕ. ಆದರೆ ಇಂದು ತನ್ನ ಶೈಕ್ಷಣಿಕ ಉತ್ಕ್ರಷ್ಟತೆಯೊಂದಿಗೆ ಸಂಸ್ಥೆ ನರ್ಸರಿ ಇಂದ ಪದವಿಯ ವರೆಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಕುಂದಾಪುರ ಹಾಗೂ ಬೈoದೂರು ತಾಲೂಕಿನ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ಬಡ ಮತ್ತು ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ಈ ಸಂಸ್ಥೆಯ ಶೈಕ್ಷಣಿಕ ಕಾಳಜಿಯ ಸಾರ್ಥಕ್ಯಕ್ಕೆ ಈಗ ಸುವರ್ಣ ಸಂಭ್ರಮ . ಕಳೆದ ನಾಲ್ಕುವರೆ ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಈ ಸಂಸ್ಥೆ ರೂಪಿಸಿದೆ. ಪ್ರಸ್ತುತ ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸoಗ ಮಾಡುತ್ತಿದ್ದಾರೆ. ಶಿಕ್ಷಣದೊಂದಿಗೆ ಕಲಿಕೆ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ವಿಪುಲ ಅವಕಾಶಗಳಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಶಿಕ್ಷಣ ಸಂಸ್ಥೆಗಳು ತಮ್ಮನ್ನು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

ಯಶಸ್ಸಿನ ರೂವಾರಿ – ಪ್ರೇರಕ ಶಕ್ತಿ

– ಶ್ರೀ.ಬಿ.ಎಮ್.ಸುಕುಮಾರ್ ಶೆಟ್ಟಿ

ಕರಾವಳಿ ಕುಂದಾಪುರ ಪರಿಸರದ ಶೈಕ್ಷಣಿಕ, ಧಾರ್ಮಿಕ, ಔಧ್ಯಮಿಕ, ರಾಜಕೀಯ ಮತ್ತು ಸಾಮಾಜಿಕ ವಲಯದ ಮಹತ್ವಪೂರ್ಣ ಹೆಸರು ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬ ಧೈಯವನ್ನು ಇಟ್ಟುಕೊಂಡು ಹಗಲಿರುಳು ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ ಶ್ರೀಯುತರು ತಮ್ಮ ಯೋಚನೆ, ಯೋಜನೆಗಳನ್ನು ಕಾರ್ಯರೂಪಗೊಳಿಸಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದ ಈ ಸಂಸ್ಥೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆಇಂದಿನ ಶೈಕ್ಷಣಿಕ ಅವಸರಗಳಿಗೆ ಎಲ್ಲಾ ನೆಲೆಯಲ್ಲಿಯೂ ಸ್ಪಂದಿಸುತ್ತಿರುವುದು ಶ್ರೀಯುತರ ದಕ್ಷ ಆಡಳಿತಕ್ಕೆ ಹಿಡಿದ ಕನ್ನಡಿ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಈ ಎಲ್ಲಾ ವಿದ್ಯಾ ಸಂಸ್ಥೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾದರಿ ಸಂಸ್ಥೆಗಳನ್ನಾಗಿ ರೂಪಿಸಬೇಕೆಂಬ ಉತ್ಕಟ ಹಂಬಲವನ್ನು ಹೊಂದಿದ್ದಾರೆ.

ಎಚ್.ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ 

ಉಡುಪಿ ಜಿಲ್ಲೆಯ ಮೊದಲ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಕುಂದಾಪುರ ಪರಿಸರದಲ್ಲಿ ಶಿಕ್ಷಣ, ಶಿಕ್ಷಣದ ಜೊತೆ ಸಂಸ್ಕಾರ, ಸಮುದಾಯದ ಸಹಭಾಗಿತ್ವ, ಹೊಸ ಸಾಧ್ಯತೆಗಳೊಂದಿಗೆ ಅಕ್ಷರ ಪ್ರೀತಿಯನ್ನು ಅಕ್ಕರೆಯಿಂದ ಪ್ರಚುರಪಡಿಸುವ ಉದ್ದೇಶ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.)ಯದು.ಹಲಸನಾಡು ಮಾಧಪ್ಪಯ್ಯ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಪ್ರೈಮರೀ ಸ್ಕೂಲ್ ಹೆಸರಿನಲ್ಲಿ ರೂಪುತಳೆದ ಈ ಶಾಲೆ ಉಡುಪಿ ಜಿಲ್ಲೆಯ ಮೊದಲ ಆಂಗ್ಲ ಮಾಧ್ಯಮ ಶಾಲೆ ಎನ್ನುವ ಹೆಗ್ಗಳಿಕೆಪಡೆದಿದೆ.ಆಂಗ್ಲಮಾಧ್ಯಮ ಶಿಕ್ಷಣ ಸಾಮಾನ್ಯವರ್ಗಕ್ಕೆ ಕನಸಾಗಿದ್ದ 1975ರ ಹೊತ್ತಿಗೆ ಯೋಚನೆ, ಯೋಜನೆಯಾಗಿ ಧೈರ್ಯ, ಆಸ್ತೆಯಿಂದ ಹುಟ್ಟಿಕೊಂಡ ಈ ಎಚ್.ಎಮ್.ಎಮ್. ಸಂಸ್ಥೆಗೆ ಈಗ 50 ರ ಸಂಭ್ರಮ

ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಶಾಲೆಯೆಂದರೆ ಸಂತಸದ ತಾಣವಾಗಿರಬೇಕು. ಈ ನೆಲೆಯಲ್ಲಿಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳನ್ನು ವಿಭಿನ್ನವಾಗಿ ಆಯೋಜಿಸಿ ಮಕ್ಕಳಿಗೆ ಕಲಿಕೆಯೊಂದನ್ನು ಸಂಭ್ರಮವಾಗಿಸುವಲ್ಲಿ ಕಾಳಜಿ ವಹಿಸುತ್ತಿದೆ. ಕಲಿಕೆಯನ್ನು ಸಾಮಾಜಿಕ ವ್ಯವಸ್ಥೆಯೊಂದಿಗೆ ಹೊಂದಾಣಿಸುವುದು, ಜ್ಞಾನ, ಕೌಶಲ, ಸ್ವತಂತ್ರ ಚಿಂತನೆಗಳಿಗೆ ಒತ್ತುಕೊಟ್ಟು, ದೈನಂದಿನ ಜೀವನಶೈಲಿಯೊಂದಿಗೆ ಸಮ್ಮಿಲನಗೊಳಿಸುವುದು ಹಾಗೂ ಪ್ರತೀ ಮಗುವಿನಲ್ಲಿ ಬಿಂಬಿತವಾಗುತ್ತಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರದರ್ಶಿಸುವಂತೆ ಮಾಡುವ ಪೂರಕ ವಾತಾವರಣದ ನಿರ್ಮಾಣ ನಮ್ಮ ಸಂಸ್ಥೆಯ ಬೋಧಕ ವರ್ಗದ ಮೊದಲ ಆದ್ಯತೆ.

ಮಕ್ಕಳನ್ನು ಭಾವನಾತ್ಮಕವಾಗಿ ಆರಿತುಅವರ ಗೊಂದಲ-ತಳಮಳಗಳನ್ನು ಹೋಗಲಾಡಿಸಿ ಅವರು ದೃಢವಾದ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸುವ ಶಾಲೆಯ ವಿಭಿನ್ನ ಪ್ರಯತ್ನವೇ ಮೆಂಟರಿಂಗ್, ಈ ವ್ಯವಸ್ಥೆಯಲ್ಲಿ ಪ್ರತೀ ಶಿಕ್ಷಕನು

ಮಗುವಿನ ಮನಸ್ಸನ್ನು ಒಳಹೊಕ್ಕು, ಅರ್ಥೈಸಿಕೊಂಡು ಅವರಲ್ಲಿ ಧೈರ್ಯ, ಭರವಸೆ, ಆತ್ಮವಿಶ್ವಾಸವನ್ನು ಮೂಡಿಸುವ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸುವ ಮಾರ್ಗದರ್ಶಿಯಾಗಿರುತ್ತಾನೆ.

ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ

ಕುಂದಾಪುರದ ಪ್ರಥಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆ 1982ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ಕುಂದಾಪುರದ ಪ್ರಥಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಾಗಿದ್ದು, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಹೆಮ್ಮೆಯ ವಿದ್ಯಾಸಂಸ್ಥೆಯಾಗಿದೆ.ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದ ವ್ಯಾಸ ಕುಂಜಿಬೆಟ್ಟು ರಾಮಚಂದ್ರ ಆಚಾರ್ಯ ಸ್ಮಾರಕ ಆಂಗ್ಲಮಾಧ್ಯಮ ಪ್ರೌಢ ಶಾಲೆಯು” (ವಿ.ಕೆ.ಅರ್ ಆಚಾರ್ಯ) ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಸಮಾಜದ ಎಲ್ಲಾ ಸ್ತರದ ಮಕ್ಕಳೂ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬೇಕು ಎನ್ನುವ ಧೈಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಪಠ್ಯ ಮಾತ್ರವಲ್ಲದೆ ಪತ್ಯೇತರ ಚಟುವಟಿಕೆಗಳಲ್ಲಿಯೂ ಅಗ್ರಮಾನ್ಯವೆನಿಸಿದ ಈ ಸಂಸ್ಥೆಯು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಕುಂದಾಪುರದ ಮುಖ್ಯಭಾಗದಲ್ಲಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಾಲಾವಾಹನದ ವ್ಯವಸ್ಥೆ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ನೀಡಿದೆ. ಶಿಸ್ತಿಗೆ ಮೊದಲ ಪ್ರಾಶಸ್ತ್ರವಿರುವ ಈ ಸಂಸ್ಥೆಯಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾವ್ಯವಸ್ಥೆ ಇದ್ದು. ವಿದ್ಯಾರ್ಥಿಗಳು ಚೆಸ್, ಕರಾಟೆ ಹಾಗೂ

ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿ ಮಿಂಚುವ ಮೂಲಕ ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಅಂತರ್ಜಾಲ ಸೌಲಭ್ಯವನ್ನು ಒಳಗೊಂಡ ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್, ಉತ್ತಮ ಪುಸ್ತಕಗಳನ್ನೊಳಗೊಂಡ ವಾಚನಾಲಯ ಹಾಗೂ ಪ್ರಯೋಗಾಲಯದ ವ್ಯವಸ್ಥೆ ಇದೆ. ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ ಹಾಗೂ ಟಿನೋವೇಟರ್ಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ವಿಜೇತರಾಗಿದ್ದಾರೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗುವ ಎನ್.ಸಿ.ಸಿ. ಸ್ಕೌಟ ಹಾಗೂ ಗೈಡ್ ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಅವರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬಲ್ಲ ಯೋಗ, ಪ್ರಾಣಾಯಾಮ, ಕರಾಟೆ, ಚಿತ್ರಕಲೆ, ಕರಕುಶಲ ಕಲೆಗಳಿಗೆ ಹೆಚ್ಚಿನ ಆದ್ಯತೆ ಇದೆ. ನಿರಂತರ ಕಾರ್ಯದಕ್ಷತೆಯಿಂದ ಈ ಸಂಸ್ಥೆಯು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತನ್ನ ಗುಣಮಟ್ಟವನ್ನು ಕಾಯ್ದುಕೊಂಡಿದೆ.

ಅರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು

ಪ್ರೌಢಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣ ಮಟ್ಟದ ಪದವಿಪೂರ್ವ ಶಿಕ್ಷಣ, ವೃತ್ತಿಪರ ಪ್ರವೇಶ ಪರೀಕ್ಷಾ ತರಬೇತಿಗಳು ಒಂದೇ ಸೂರಿನಲ್ಲಿ ದೊರೆಯುವಂತಾಗಬೇಕು, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಾನವೀಯ ನೆಲೆಯಲ್ಲಿ ಸಜ್ಜುಗೊಳಿಸಬೇಕು ಎಂಬ ನಿಟ್ಟಿನಲ್ಲಿ 2003ರಲ್ಲಿ ರೂಪುಗೊಂಡ ಸಂಸ್ಥೆ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು. 56ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ ಸಾವಿರಕ್ಕೂ ಮಿಕ್ಕಿ

ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಸಂಸ್ಥೆ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ. ಚಾರಿತ್ರ್ಯ ನಿರ್ಮಾಣಕ್ಕೆ ಒತ್ತು ನೀಡುವತ್ತ ಹೆಚ್ಚು ಗಮನ ಹರಿಸುತ್ತಿದೆ.ಪಠ್ಯದ ಜೊತೆಗೆ ವೃತ್ತಿಪರ ಪ್ರವೇಶ ಪರೀಕ್ಷಾ ತರಬೇತಿ ನೀಡಲಾಗುತ್ತಿದ್ದು ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ, ಪಿ.ಸಿ.ಎಂ.ಸಿ, ಪಿ.ಸಿ.ಎಂ.ಎಸ್, ಪಿ.ಸಿ.ಎಂ.ಇ ಎಂಬ ನಾಲ್ಕು ಸಂಯೋಜನೆಗಳಿದ್ದು ಪ ಜೊತೆಗೆ ಸಿಇಟಿ, ನೀಟ್, ಜೆಇಇ ಮೈನ್ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಇದೆ.

ವಾಣಿಜ್ಯ ವಿಭಾಗದಲ್ಲಿ ಎಸ್.ಇ.ಬಿ.ಎ, ಸಿ.ಇ.ಬಿ.ಎ, ಬಿ.ಇ.ಬಿ.ಎ ಎಂಬ ಮೂರು ಸಂಯೋಜನೆಗಳಿದ್ದು, ಸಿಪಿಟಿ, ಬ್ಯಾಂಕಿಂಗ್‌ನಂತಹ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಮಾಹಿತಿಯನ್ನು ನೀಡಲಾಗುತ್ತಿದೆ. ಕಂಪ್ಯೂಟರ್‌ನಲ್ಲಿ ಪಿಜಿಡಿಸಿಎ, ಡಿಪ್ಲೋಮಾ ಕೋರ್ಸ್‌ಗೂ ಅವಕಾಶವಿದ್ದು, ಕರಾಟೆ ಶಿಕ್ಷಣ ತರಬೇತಿ ಸಹ ನೀಡಲಾಗುತ್ತಿದೆ.

ಡಾ.ಬಿ.ಬಿ.ಹೆಗ್ಡೆಪ್ರಥಮದರ್ಜೆಕಾಲೇಜು

ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಕೇಂದ್ರ ಕುoದಾಪುರ ಎಜ್ಯುಕೇಶನ್ಸೊಸೈಟಿಯ ಅಂಗಸಂಸ್ಥೆಯಾಗಿರುವ ಡಾ| ಬಿ. ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜು (ಬಿಬಿಎಚ್‌ಸಿ) ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ವಾಣಿಜ್ಯ (ಬಿ.ಕಾಂ.), ವ್ಯವಹಾರಆಡಳಿತ (ಬಿಬಿಎ) ಮತ್ತುಗಣಕವಿಜ್ಞಾನ (ಬಿಸಿಎ) ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣಕೇಂದ್ರವಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಈ ವಿದ್ಯಾಸಂಸ್ಥೆ ಕಳೆದ 14 ವರ್ಷಗಳಿಂದ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಗಳನ್ನು ಪಡೆಯಲಿಚ್ಛಿಸುವ ವಿದ್ಯಾರ್ಥಿಗಳ ವ್ಯಕ್ತಿತ್ವವಿಕಸನಕ್ಕೆ ಬೇಕಾಗುವ ಎಲ್ಲಾ ಪ್ರಾಕಾರಗಳನ್ನು ಅಳವಡಿಸಿಕೊಂಡು, ಅತ್ಯಂತ ವಿಶಿಷ್ಠ ಮತ್ತು ವೈವಿಧ್ಯಮಯವಾಗಿ ಕೆಲಸನಿರ್ವಹಿಸುತ್ತಿರುವ ವಿದ್ಯಾ ದೇಗುಲವಾಗಿ ಅಭಿವೃದ್ಧಿಹೊಂದುತ್ತಿದೆ. 130ವಿದ್ಯಾರ್ಥಿಗಳೊಂದಿಗೆ2010 ರಲ್ಲಿ ಶ್ರೀಬಿ.ಎಂ. ಸುಕುಮಾರ ಶೆಟ್ಟಿಯವರ ಮುಂದಾಳತ್ವದಲ್ಲಿಆರಂಭಗೊoಡ ಈಸಂಸ್ಥೆ 2021ರಲ್ಲಿNAACನಿoದ ಪ್ರಥಮಆವರ್ತದಲ್ಲಿB++ಮಾನ್ಯತೆಯನ್ನುಪಡೆದಿರುವ ಅತ್ಯಂತ ಕಿರಿಯಪ್ರಾಯದ ಸಂಸ್ಥೆಯಾಗಿದ್ದು, UGC ಯಿಂದ 2(f) ಮಾನ್ಯತೆಪಡೆದಿದ್ದು, ಕರ್ನಾಟಕ ಸರಕಾರದಿಂದ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಗಳಿಗೆ ಶಾಶ್ವತಸಂಯೋಜನೆಗೊಳಪಟ್ಟಿರುವುದು ಕೂಡವಿಶೇಷವಾಗಿರುತ್ತದೆ. ಅತ್ಯುತ್ತಮ ಆಡಳಿತಮಂಡಳಿ, ದಕ್ಷ ಪ್ರಾಂಶುಪಾಲರು, ಯುವ-ಅನುಭವೀ ಪ್ರಾಧ್ಯಾಪಕವೃಂದ, ಪ್ರಕೃತಿದತ್ತವಾದ ಮತ್ತು ಶಿಸ್ತುಬದ್ಧವಾದ ಕಾಲೇಜ್ಕ್ಯಾಂಪಸ್, ಸಮೃದ್ಧಲೈಬ್ರರಿ, ಕಂಪ್ಯೂಟ ರ್ಲ್ಯಾಬ್‌ಗಳು, ಕ್ರೀಡಾಂಗಣಗಳು, ಶುಚಿ-ರುಚಿಯಾದ ಕ್ಯಾಂಟೀನ್ವ್ಯವಸ್ಥೆ,1500 ಜನರು ಕುಳಿತು ಕೊಳ್ಳಬಹುದಾದ ವಿಶಾಲವಾದ ಸಭಾಂಗಣ, ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿಗಳು, ಕಾಲೇಜ್ಬಸ್ಸಿನ ವ್ಯವಸ್ಥೆ, ಸಂಪೂರ್ಣವಾಗಿಸಿಸಿ ಕ್ಯಾಮರಾದ ಕಣ್ಗಾವಲಿರುವ ಕ್ಯಾಂಪಸ್ಹೀಗೆ ಹಲವಾರು ವ್ಯವಸ್ಥೆಗಳನ್ನು ಹೊಂದಿರುವ ಈಕಾಲಘಟ್ಟಕ್ಕೆ ಬೇಕಾಗುವ ವಿದ್ಯಾಸಂಸ್ಥೆಯಾಗಿದೆ.

ಈವಿದ್ಯಾಸಂಸ್ಥೆಕಳೆದ 14 ವರ್ಷಗಳಿಂದ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ ಸಮಾನವಾಗಿ ಪ್ರಾಮುಖ್ಯತೆಯನ್ನು ನೀಡುತ್ತಾಬಂದಿದ್ದು, ಶೈಕ್ಷಣಿಕ-ಸಾಂಸ್ಕೃತಿಕ-ಸಾಹಿತ್ಯಿಕ-ಕ್ರೀಡೆ-ಕ್ಯಾoಪಸ್ಪ್ಲೇಸ್‌ಮೆಂಟ್ಮತ್ತುStart upಕಾರ‍್ಯಕ್ರಮಗಳನ್ನುಮುಖ್ಯವಾಗಿಕೇಂದ್ರಿಕರಿಸಿಕೊoಡು, ಕಡಿಮೆ ದರದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ಸಮಾಜದಆರ್ಥಿಕವಾಗಿಹಿಂದುಳಿದವಿದ್ಯಾರ್ಥಿಗಳಿಗೆನೀಡುತ್ತಾಬರುತ್ತಿದೆ. ಶುಲ್ಕರಿಯಾಯಿತಿ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಹೀಗೆ ಹಲವಾರು ವಿದ್ಯಾರ್ಥಿ-ಸ್ನೇಹಿಕಾರ‍್ಯಕ್ರಮಗಳ ಮೂಲಕ ಅದೆಷ್ಟೋ ವಿದ್ಯಾರ್ಥಿಗಳಜೀವನಕ್ಕೆಬೆನ್ನೆಲುಬಾಗಿಸದಾಸಹಕರಿಸುತ್ತಿರುವವಿದ್ಯಾಸಂಸ್ಥೆಯಾಗಿದೆ.

ಬದಲಾದ ಕಾಲಘಟ್ಟಕ್ಕೆ ಸರಿಯಾಗಿB.Com.ನೊಂದಿಗೆ CA, CS, CMA, KAS, IAS ಮತ್ತು ಇನ್ನಿತರ UPSC ಪರೀಕ್ಷೆಗಳಿಗೆ ನುರಿತ ಪ್ರಾಧ್ಯಾಪಕರಿಂದ ನಿರಂತರತರಬೇತಿ ನೀಡುವುದರೊಂದಿಗೆ B.Com.ವಿದ್ಯಾರ್ಥಿಗಳಿಗೆ Data Science ವಿಷಯವನ್ನುಕೂಡ ಬೋಧಿಸಲಾಗುತ್ತಿದೆ. BBAನೊoದಿಗೆ PGCET, CAT, MAT ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ. BCA ನೊoದಿಗೆ Artificial Intelligence ಹಾಗೂ Cyber security ವಿಷಯವನ್ನು ಕೂಡಾಬೋಧಿಸುತ್ತಿರುವುದು ಸಂಸ್ಥೆಯಹೆಮ್ಮೆಯಾಗಿದೆ.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿNSS, NCC, Rovers-Rangers, Youth Red Cross, Rotaract Club ನಂತಹ 16 ವೇದಿಕೆಗಳು ಕರ್ತವ್ಯ ನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಕಾಗಲಾರದು ಎಂಬ ನಿಟ್ಟಿನಲ್ಲಿ ಬೇರೆಬೇರೆ ಬಗೆಯCertificate Course ಗಳಿಗೆ ಕೂಡಾ ತರಬೇತಿಯನ್ನು ನೀಡಲಾಗುತ್ತಿದೆ.

ಮಂಗಳೂರುವಿ.ವಿ. ನಡೆಸುತ್ತಿರುವ ಬಿ.ಕಾಂ., ಬಿಬಿಎ ಮತ್ತುಬಿಸಿಎ ಪದವಿ ಪರೀಕ್ಷೆಗಳಲ್ಲಿ ಹಲವಾರು ರ‍್ಯಾಂಕ್‌ಗಳು ಮತ್ತು ಚಿನ್ನದಪದಕಗಳನ್ನುಗಳಿಸುವುದರೊಂದಿಗೆ ದಾಖಲೆಯ ಫಲಿತಾಂಶ ನಿರಂತರವಾಗಿ ಬರುತ್ತಿರುವುದು ಕೂಡ ವಿಶೇಷವಾಗಿದೆ. ಅವಿಭಜಿತದ.ಕ. ಜಿಲ್ಲೆಯಲ್ಲಿ ವಿ.ವಿ. ಮತ್ತು ಇತರ ಸಂಸ್ಥೆಗಳು ನಡೆಸುತ್ತಿರುವ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳಲ್ಲಿ ನಿರಂತರವಾಗಿ ಬಹುಮಾನಗಳನ್ನುಗಿಟ್ಟಿಸಿಕೊಳ್ಳುತ್ತಿರುವುದು ಕೂಡಾ ಅತ್ಯಂತ ಸಂತಸದ ವಿಷಯವಾಗಿರುತ್ತದೆ.

ಮಂಗಳೂರು ವಿ.ವಿ. ನಡೆಸುವ ಅಂತರ್-ಕಾಲೇಜು ವಾರ್ಷಿಕಾಂಕ ಸ್ಪರ್ಧೆಯಲ್ಲಿನಿರಂತರವಾಗಿ 4 ವರ್ಷಗಳ ಕಾಲ ಪ್ರಥಮ ಬಹುಮಾನವನ್ನು ಪಡೆದಿರುವುದು ಒಂದು ದಾಖಲೆಯಾಗಿ ಉಳಿದಿದೆ. ವಿ.ವಿ.ನಡೆಸುವ ಕ್ರೀಡಾ ರ‍್ಯಾಂಕಿoಗ್‌ನಲ್ಲಿ 9ನೇಸ್ಥಾನ, ಉಡುಪಿ ಜಿಲ್ಲೆಯಲ್ಲಿಪ್ರಥಮ ಸ್ಥಾನ ಪಡೆದಿರುವುದು ಕೂಡ ಉಲ್ಲೇಖಾರ್ಹವಾಗಿದೆ. ಅಲ್ಲದೇ, ಜಿಲ್ಲೆಯಾದ್ಯಂತ ಬೇರೆ ಬೇರೆ ವಿಶೇಷ ಸಂದರ್ಭಗಳಲ್ಲಿ ಸುಮಾರು 2 ಗಂಟೆಗಳ ಕಾಲಪ್ರೇಕ್ಷಕರು ನಿಬ್ಬೆರಗಾಗುವಂತೆ ಸಾಂಸ್ಕೃತಿಕಕಾರ‍್ಯಕ್ರಮಗಳನ್ನು ನೀಡುವಬಲಿಷ್ಠವಾದ ತಂಡ ಈವಿದ್ಯಾಸಂಸ್ಥೆಯಲ್ಲಿರುವುದು ಅತ್ಯಂತ ಹೆಚ್ಚುಗಾರಿಕೆಯ ವಿಷಯವಾಗಿರುತ್ತದೆ..

ಈಕಾಲೇಜಿನಲ್ಲಿವ್ಯಾಸಂಗಮಾಡುತ್ತಿರುವವಿದ್ಯಾರ್ಥಿಗಳಿಗೆಕೌಶಲ್ಯಗಳನ್ನುಕಲಿಸುವದೃಷ್ಟಿಯಿಂದಮೌಲ್ಯಶಿಕ್ಷಣ, Commerce Laboratory, Business Day, Management Fest, IT Fest ಇಂತಹ ಹತ್ತು-ಹಲವಾರು ಕೌಶಲ್ಯವರ್ಧಿತ ಕಾರ‍್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಈ ವಿದ್ಯಾಸಂಸ್ಥೆಯವಿಶೇಷತೆಯಾಗಿರುತ್ತದೆ. ಅಲ್ಲದೇವಿದ್ಯಾರ್ಥಿಗಳುಬಾಹ್ಯಪ್ರಪಂಚವನ್ನುಅರ್ಥೈಸಿಕೊಳ್ಳುವದೃಷ್ಟಿಯಿಂದIndustrial Visits, Extension Activities, Out-reach programme ಗಳನ್ನು ಕೂಡಾ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳು ಬಹಳಷ್ಟು ಸಂತೋಷದಿoದ ಈಕಾರ‍್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ತಮ್ಮ ವಿದ್ಯಾಭ್ಯಾಸದೊಂದಿಗೆ ಅಳವಡಿಸಿಕೊಳ್ಳುತ್ತಿರುವುದು ಸ್ತುತ್ಯಾರ್ಹವಾಗಿದೆ

   

Related Articles

error: Content is protected !!