ಉಡುಪಿ : ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರು 1,697 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಬಿಜೆಪಿ ಸತತವಾಗಿ ಜಯ ದಾಖಲಿಸಿದಂತಾಗಿದೆ.
ಕಿಶೋರ್ ಕುಮಾರ್ ಅವರು 3,655 ಮತಗಳನ್ನು ಪಡೆದರೆ, ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ರಾಜು ಪೂಜಾರಿ 1,958 ಮತಗಳನ್ನು ಪಡೆದುಕೊಂಡಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಅನ್ವರ್ ಸಾದತ್ ಬಜತ್ತೂರು 195 ಹಾಗೂ ಪಕ್ಷೇತರ ದಿನಕರ್ ಉಳ್ಳಾಲ್ 9 ಮತಗಳನ್ನು ಪಡೆದುಕೊಂಡರು.