Home » ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸನ್ಮಾನ
 

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸನ್ಮಾನ

by Kundapur Xpress
Spread the love

ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಐತಿಹಾಸಿಕ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಭಾಗವಹಿಸಿದ ದೇಶದ ವಿವಿಧ ಭಾಗಗಳ ವಿಶ್ವವಿದ್ಯಾಲಯಗಳ ಮಾನ್ಯ ಕುಲಪತಿಗಳನ್ನು ಪರ್ಯಾಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ತಿರುಪತಿಯ ಶ್ರೀವೇಂಕಟೇಶ್ವರ ವೇದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೋ. ರಾಣಿ ಸದಾಶಿವ ಮೂರ್ತಿ, ಗುಜರಾತಿನ ಸೋಮನಾಥ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೋ.ಸುಖಾಂತಕುಮಾರ್ ಸೇನಾಪತಿ, ಭಾರತ ಸರ್ಕಾರದ ಅಧೀನದಲ್ಲಿರುವ ಭಾರತೀಯ ದರ್ಶನ ಅನುಸಂಧಾನ ಪರಿಷತ್ (ICPR) ನ ಕಾರ್ಯದರ್ಶಿಗಳಾದ ಡಾ. ಸಚ್ಚಿದಾನಂದ ಮಿಶ್ರ, ಮಹರ್ಷಿ ಪಾಣಿನಿ ಮತ್ತು ವೈದಿಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಆಚಾರ್ಯ ವಿಜಯಕುಮಾರ್ ಮೆನನ್, ಅಸ್ಸಾಂ ನ ಕುಮಾರ ಭಾಸ್ಕರ ವರ್ಮಾ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೋ. ಪ್ರಹ್ಲಾದ ಜೋಶಿ, ಸೋಮನಾಥ ವಿಶ್ವವಿದ್ಯಾಲಯದ ಪೂರ್ವ ಕುಲಪತಿಗಳು ಹಾಗೂ ಕಾಶಿ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆದ ಪ್ರೊ. ಆಚಾರ್ಯ ಗೋಪಬಂಧು ಮಿಶ್ರ, ತಿರುಪತಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಸತ್ಯನಾರಾಯಣ ಆಚಾರ್ಯ, ಚಾಣಕ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅವಧಾನಿ ಡಾ. ರಾಮಕೃಷ್ಣ ಪೆಜತ್ತಾಯ, ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಅಯ್ಯಂಗಾರ್, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವೇದಾಂತ ಉಪನ್ಯಾಸಕರಾದ ವಿದ್ವಾನ್ ಸುಧೀಂದ್ರ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ವಿದ್ವಾನ್ ಎಂ. ಪ್ರಸನ್ನ ಆಚಾರ್ಯ, ಶ್ರೀಗಳ ಕಾರ್ಯದರ್ಶಿಗಳಾದ ಶ್ರೀ ರತೀಶ್ ತಂತ್ರಿ, ಭಾರತೀಯ ವಿದ್ವತ್ ಪರಿಷತ್ ಬೆಂಗಳೂರು ಇದರ ಪ್ರಮುಖರಾದ ಆಚಾರ್ಯ ವೀರನಾರಾಯಣ ಪಾಂಡುರಂಗಿ, ಡಾ. ಬಿ. ಗೋಪಾಲಾಚಾರ್ಯ, ಶ್ರೀ ಎಂ.ಬಿ.ಕುಂಜಾರ್, ಶ್ರೀ ಪ್ರಮೋದ ಸಾಗರ್, ಶ್ರೀ ರಾಮಪ್ರಿಯ ಮುಂತಾದವರು ಹಾಜರಿದ್ದರು.

   

Related Articles

error: Content is protected !!