ನದಿಗೆ ಬಿದ್ದು ಸಾವು
ಉಪ್ಪಿನಕುದ್ರು ನಿವಾಸಿ ನಾರಾಯಣ (65 ವರ್ಷ) ಎಂಬವರು ಮನೆ ಸಮೀಪದ ಪಂಚ ಗಂಗಾವಳಿ ಹೊಳೆ ಬದಿಗೆ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಅವರ ಸಂಬಂಧಿ ನಾಗರಾಜ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹೊಳೆಗೆ ಬಿದ್ದು ಸಾವು
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ನಿವಾಸಿ ಚಂದ್ರ (45 ವರ್ಷ) ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆ ಕೃಷಿ ಕೆಲಸ ಮಾಡಿಕೊಂಡಿರುವ ಇವರು ಕಾಲ್ಪೋರಡು ಗ್ರಾಮದ ಕುಂಚನಹೊಳೆ ಎಂಬಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ಗೋಪಾಲಕೃಷ್ಣ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಚಿಕಿತ್ಸೆ ಫಲಕಾರಿಯಾಗದೆ ಸಾವು
ಉಪ್ಪುಂದ ಗ್ರಾಮದ ನಿವಾಸಿ ಮೀನುಗಾರ (53 ವರ್ಷ) ಎಂಬುವರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತೀವೃ ಅಸ್ವಸ್ಥಗೊಂಡಿದ್ದರು ತಕ್ಷಣ ಅವರನ್ನು ದಡಕ್ಕೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಸಹೋದರ ಸುಬ್ರಹ್ಮಣ್ಯ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ