Home » ಆರೋಪಿಗಳ ಮೊಬೈಲ್,ಕಾರು ಪೊಲೀಸ್ ವಶಕ್ಕೆ
 

ಆರೋಪಿಗಳ ಮೊಬೈಲ್,ಕಾರು ಪೊಲೀಸ್ ವಶಕ್ಕೆ

ಅಜೆಕಾರು ಕೊಲೆ ಪ್ರಕರಣ

by Kundapur Xpress
Spread the love

ಕಾರ್ಕಳ : ಅಜೇಕಾರು ಬಳಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಪ್ರತಿಮಾ ತನ್ನ ಪತಿ ಬಾಲಕೃಷ್ಣಗೆ ಆಹಾರದಲ್ಲಿ ಸೇರಿಸಿದ್ದ ವಿಷಪದಾರ್ಥದ ಮಾಹಿತಿ ಲಭಿಸಿದೆ ಈ ವಿಷಕಾರಿ ಪದಾರ್ಥವು ಅರ್ಸೆನಿಕ್‌ ಟ್ರೈ ಆಕ್ಸೈಡ್‌ ಎಂದು ತಿಳಿದು ಬಂದಿದ್ದು ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ ಮಾಹಿತಿ ನೀಡಿದ್ದಾರೆ

ವಿಷವಸ್ತುವನ್ನು ಪ್ರಿಯಕರ ದಿಲೀಪ್ ಹೆಗ್ಡೆ ಉಡುಪಿ ಅಂಗಡಿಯೊಂದರಿಂದ ಖರೀದಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸರು ಅಂಗಡಿ ಮಾಲೀಕನ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಎ1 ಆರೋಪಿಗಳಾದ ಪ್ರತಿಮಾಳಿಂದ 2 ಮೊಬೈಲ್ ಎ 2 ಆರೋಪಿಗಳಾದ ದಿಲೀಪ್ ಹೆಗ್ಡೆಯಿಂದ ಮೊಬೈಲ್ ಮತ್ತು 2 ಸಿಮ್ ಸೇರಿದಂತೆ ಒಟ್ಟು 4 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಜೊತೆಗೆ ಆರೋಪಿ ದಿಲೀಪ್ ಹೆಗ್ಡೆಯ ಕಾರು ಹಾಗೂ ಬೈಕನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದ್ದಾರೆ. 

 ಆರ್ಸೆನಿಕ್ ಸೇವನೆಯಿಂದ ಅಂಗಾಂಗ ವೈಫಲ್ಯ

ಅರ್ಸೆನಿಕ್‌ ಟ್ರೈ ಆಕ್ಸೈಡ್‌ ರಾಸಾಯನಿಕ ವಸ್ತು ಹೆಚ್ಚು ವಿಷಕಾರಿ ಮತ್ತು ಬಹುಮುಖ ಸಂಯುಕ್ತ ವಸ್ತುವಾಗಿದೆ. ಇದನ್ನು ಹೆಚ್ಚಾಗಿ ಶಾಲಾ ಕಾಲೇಜುಗಳ ಲ್ಯಾಬ್‌ಗಳಲ್ಲಿ ಬಳಸಲಾಗುತ್ತದೆ. ಬಿಳಿ ಅಥವಾ ಹಳದಿ ಬಣ್ಣದ ಮಡಿಯಾಗಿದ್ದು ವಾಸನೆಯಿರುವುದಿಲ್ಲ ಈ ವಿಷಕಾರಿ ವಸ್ತು ನೀರು, ಎಥೆನಾಲ್ ಮತ್ತು ಇತರ ದ್ರಾವಕಗಳಲ್ಲಿ ಕರಗುತ್ತದೆ. ಆರ್ಸೆನಿಕ್ ಟ್ರೈ ಆಕ್ಸೆಡ್ ಸೇವನೆಯಿಂದ ರಕ್ತಹೀನತೆ, ಕಾರ್ಡಿಯಾಕ್ , ಹೃದಯ ಸ್ತಂಭನ, ಉಸಿರಾಟದ ವೈಫಲ್ಯ, ಮೂತ್ರಪಿಂಡದ ಹಾನಿ ಉಂಟಾಗುತ್ತದೆ.

ಆಹಾರದಲ್ಲಿ ವಿಷ ನೀಡುತ್ತಿದ್ದ ಆರೋಪಿ

ಬಾಲಕೃಷ್ಣರ ಪತ್ನಿ ಪ್ರತಿಮಾಳಿಗೆ ಆರ್ಸೆನಿಕ್ ಟ್ರೈ ಆಕ್ಸೆಡ್ ‘ವಿಷ ಪದಾರ್ಥವನ್ನು ದಿಲೀಪ್ ಹೆಗ್ಡೆ ಉಡುಪಿಯ ಲ್ಯಾಬ್‌ನಿಂದ ತರಿಸಿ ಪ್ರತಿಮಾಳಿಗೆ ನೀಡಿದ್ದ ಪ್ರತಿಮಾ ನಿತ್ಯ ಆಹಾರದ ಜೊತೆ ಪತಿ ಬಾಲಕೃಷ್ಣ ಅವರಿಗೆ ಆರ್ಸೆನಿಕ್ ಟೈ ಆಕ್ಸೆಡ್ ಕರಗಿಸಿ ನೀಡುತ್ತಿದ್ದಳು. ಇದರಿಂದಾಗಿ ಬಾಲಕೃಷ್ಣ ಅಂಗಾಗಗಳ ಸಂವೇದನೆ ಕಳೆದುಕೊಂಡು ಆಸ್ಪತ್ರೆಗಳಿಗೆ ಅಲೆಯುವಂತಾಯಿತು. ಆ.20 ರ ರಾತ್ರಿ ಆರೋಪಿಗಳಾದ ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆ ಪ್ರತಿಮಾಳ ಪತಿ ಬಾಲಕೃಷ್ಣ ಅವರನ್ನು ಉಸಿರು ಕಟ್ಟಿಸಿ ಕೊಲೆಗೈದಿದ್ದರು.

   

Related Articles

error: Content is protected !!