Home » ಬೆಂಗಳೂರು-ಹದಗೆಡುತ್ತಿರುವ ಸಾಮಾಜಿಕ ಸ್ವಾಸ್ಥ್ಯ
 

ಬೆಂಗಳೂರು-ಹದಗೆಡುತ್ತಿರುವ ಸಾಮಾಜಿಕ ಸ್ವಾಸ್ಥ್ಯ

-ಡಾ.ಕೆ.ಎಸ್.ಕಾರಂತ

by Kundapur Xpress
Spread the love

ಕೋಟ : ಕಾಲ ಸರಿದಂತೆ ಸಾಮಾಜಿಕ ಬದುಕಿನ ಪಲ್ಲಟಗಳಿಂದಾಗಿ ಒಂದೆಡೆಯಲ್ಲಿ ಜೀವನ ಶೈಲಿಯ ಖಾಯಿಲೆಗಳು ಹೆಚ್ಚುತ್ತಿರುವುದರೊಂದಿಗೆ ಮಾದಕ ವ್ಯಸನದ ಪಿಡುಗು ಮನು ಕುಲಕ್ಕೆ ಮಾರಕವಾಗುತ್ತಿರುವುದು ಕಳವಳಕಾರಿ ಎಂದು ಕುಂದಾಪುರದ ಮನೋವೈದ್ಯಕೀಯ ತಜ್ಞ ಡಾ.ಕೆ.ಎಸ್.ಕಾರಂತರು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಪನ್ನಗೊಂಡ ಭಾರತೀಯ ವೈದ್ಯ ಸಂಘದ ರಾಜ್ಯ ಸಮ್ಮೇಳನ- ಮೆಡಿಕಾನ್ 90 ರಲ್ಲಿ ಮದ್ಯಪಾನ ಮತ್ತು ಮಾದಕ ವ್ಯಸನದ ಕುರಿತು ವಿಶೇಷ ದತ್ತಿ ಉಪನ್ಯಾಸ ಮಾಡಿದ ಡಾ.ಕಾರಂತರನ್ನು ವಿಶೇಷವಾಗಿ ಗೌರವಿಸಲಾಯಿತು.

ನಿರ್ಗಮನ ಅಧ್ಯಕ್ಷ ಡಾ.ಎಸ್.ಶ್ರೀನಿವಾಸ,ಅಧ್ಯಕ್ಷ ಡಾ.ವೀರಭದ್ರ ಚಿನಿವಾಲರ್ ಮತ್ತು ನಿಯೋಜಿತ ಅಧ್ಯಕ್ಷ ಡಾ.ವೀರಭದ್ರಯ್ಯ ಇದ್ದರು.

   

Related Articles

error: Content is protected !!