ಚಿತ್ರದುರ್ಗ : ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಸಾವಿರಾರು ಎಕರೆ ಜಮೀನನ್ನೇ ನುಂಗಲು ಹೊಂಚುಹಾಕಿರುವ ವಕ್ಸ್ ಬೋರ್ಡ್ ಅನ್ನದಾತರ ನಿದ್ದೆಗೆಡಿಸುತ್ತಿದೆ. ವಕ್ಸ್ನ ಈ ಅವಾಂತರ ರಾಜ್ಯಾದ್ಯಂತ ದೊಡ್ಡ ಗಂಡಾಂತರವನ್ನೇ ಸೃಷ್ಟಿಸುತ್ತಿದೆ. ರಾತ್ರಿ ಬೆಳಗಾಗುವುದರೊಳಗೆ ಕೃಷಿಕರ ಪಹಣಿಯಲ್ಲಿ ವಕ್ಸ್ ಹೆಸರು ನಮೂದಾಗುತ್ತಿದೆ. ವಿಜಯಪುರದಿಂದ ಆರಂಭವಾದ ಈ ಸಮಸ್ಯೆ ಧಾರವಾಡ, ಚಿತ್ರದುರ್ಗಕ್ಕೂ ವ್ಯಾಪಿಸಿದೆ. ಈ ಬಗ್ಗೆ ಒಬ್ಬೊಬ್ಬ ಸಚಿವರು ಒಂದೊಂದು ಬಗೆಯ ಹೇಳಿಕೆ ನೀಡುತ್ತಿದ್ದಾರೆ. ಇವು ಜನರನ್ನು ಇನ್ನಷ್ಟು ಗೊಂದಲಕ್ಕೆ ದೂಡುತ್ತಿವೆ. ಹೀಗೇ ಮುಂದುವರಿದರೆ ಜನರು ಸಿಡಿದೇಳುವ ದಿನ ದೂರವಿಲ್ಲ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ