ಕೋಟ : ರೋಟರಿ ಕ್ಲಬ್ ಹಂಗಾರಕಟ್ಟೆ -ಸಾಸ್ತಾನ ಇವರ ಅಶ್ರಯದಲ್ಲಿ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಪ್ರತಿಭೆಗಳ ದಿಬ್ಬಣ `ಚಿಲುಮೆ-2024′ ಶನಿವಾರ ಮಾಬುಕಳ ಚೇತನಾ ಪ್ರೌಢಶಾಲೆಯಲ್ಲಿ ಜರುಗಿತು. ರೋಟರಿ ಜಿಲ್ಲಾ ಗವರ್ನರ್ ಸಿ.ಎ. ದೇವ್ ಆನಂದ್ ಅವರು ಸಾಂಸ್ಕೃತಿಕ ಸ್ಪರ್ಧೆ `ಚಿಲುಮೆ-2024’ನ್ನು ಉದ್ಘಾಟಿಸಿ ಮಾತನಾಡಿ, ರೋಟರಿ ವಲಯದ ಸದಸ್ಯರಲ್ಲಿ ಸ್ನ್ನೇಹ, ಸೌಹಾರ್ದತೆಯನ್ನು ಮೂಡಿಸುವ ಈ ಸಾಂಸ್ಕೃತಿಕ ಚಿಲುಮೆ ಕಾರ್ಯಕ್ರಮ ಸುಪ್ತ ಪ್ರತಿಭೆ`ೆಗಳ ಅನಾವರಣಕ್ಕೆ ಒಂದು ವೇದಿಕೆಯಾಗಿದೆ ಎಂದರು. ಹಂಗಾರಕಟ್ಟೆ – ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ ಆಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ನಿಯೋಜಿತ 2026-27 ರ ಜಿಲ್ಲಾ ಗವರ್ನರ್ ಬಿ.ಎಂ.ಭಟ್. ಸಹಾಯಕ ಗವರ್ನರ್ ರಾಘವೆಂದ್ರ ಎಂ.ಸಾಮಗ , ವಲಯ ಪ್ರತಿನಿಧಿ ರೊ| ಅಲನ್ ವಿ.ಲೂವಿಸ್, ವಲಯ ಪ್ರತಿನಿಧಿಗಳಾದ ರೊ| ದಿನೇಶ್ ಕುಮಾರ್ ನಾಯರಿ, ರೊ| ರಾಜಾರಾಮ ಶೆಟ್ಟಿ, ರೊ| ಶಂಕರ್ ಸುವರ್ಣ, ಕಾರ್ಯಕ್ರಮ ನಿರ್ದೇಶಕ ರೊ| ನರೇಂದ್ರ ಕುಮಾರ್ ಕೋಟ, ಸಾಂಸ್ಕೃತಿಕ ಚಟುವಟಿಕೆಗಳ ಆಧ್ಯಕ್ಷ ರೊ| ವೆಂಕಟೇಶ ಭಟ್ ಉಪಸ್ಥಿತರಿದ್ದರು. ವಲಯದ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ರೊ| ಮುರಳೀಧರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಚೆಲ್ಲಿಮಕ್ಕಿ ನಿರೂಪಿಸಿದರು. ಕಾರ್ಯದರ್ಶಿ ಸುಲತ ಹೆಗ್ಡೆ ವಂದಿಸಿದರು.