ಕುಂದಾಪುರ : ಕನ್ನಡ ರಾಜ್ಯೋತ್ಸವದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ ಇವರ ನೇತೃತ್ವದಲ್ಲಿ ಏಳು ದಿನಗಳ ಕಾಲ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ವರ್ಷವೂ ಕೂಡ ಕನ್ನಡ ಹಬ್ಬವನ್ನು ಆಚರಿಸಲಾಗುತ್ತಿದೆ ಆ ಪ್ರಯುಕ್ತ ಇಂದು ಕುಂದಾಪುರ ನಗರದಲ್ಲಿ ಮಧ್ಯಾಹ್ನ 3:30ಕ್ಕೆ ಕನ್ನಡ ರಥೋತ್ಸವದ ಪುರ ಮೆರವಣಿಗೆ ಜರುಗಲಿದೆ ಮೆರವಣಿಗೆಯಲ್ಲಿ ವಿವಿಧ ಸಮಾಜದ ಮುಖಂಡರು ವಿವಿಧ ಶಾಲೆಗಳ ಎನ್ ಸಿ ಸಿ ಕೆಡೆಟ್ ಗಳು ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ಹಾಗೂ ವಿವಿಧ ಜಾನಪದ ಡೊಳ್ಳು ಕುಣಿತಗಳೊಂದಿಗೆ ಆಕರ್ಷಕ ಟ್ಯಾಬ್ಲೋಗಳು ಭಾಗವಹಿಸಲಿದ್ದು
ಕನ್ನಡ ತಾಯಿ ಭುವನೇಶ್ವರಿಯ ಫೋಟೋವನ್ನು ರಥದಲ್ಲಿ ಕುಳ್ಳಿರಿಸಿ ಅಲಂಕಾರದೊಂದಿಗೆ ನಗರದ ಬೋರ್ಡ ಹೈ ಸ್ಕೂಲ್ ನಿಂದ ಹೊರಟು ಹೊಸ ಬಸ್ ಸ್ಟ್ಯಾಂಡ್ ಅಲ್ಲಿಂದ ಹಳೆ ಬಸ್ ಸ್ಟಾಂಡ್ ಮೂಲಕ ಶಾಸ್ತ್ರಿವೃತ್ತದಲ್ಲಿ ತಿರುಗಿ ನಂತರ ನಗರದ ಬೋರ್ಡ ಹೈ ಸ್ಕೂಲ್ ನಲ್ಲಿ ಸಂಪನ್ನಗೊಳ್ಳುವುದು ಎಂದು ಕುಂದಾಪುರ ಕಲಾಕ್ಷೇತ್ರ ಟ್ರಸ್ಟ್ ಇದರ ಅಧ್ಯಕ್ಷರಾದ ಬಿ ಕಿಶೋರ್ ಕುಮಾರ್ ಕುಂದಾಪುರ ಇವರು ತಿಳಿಸಿದ್ದಾರೆ