ಕುಂದಾಪುರ : ಕುಂದಾಪುರ ನಗರ ಸಮೀಪದಲ್ಲಿರುವ ಕೋಣಿ ಗ್ರಾಮದ ಕರ್ಣಾಟಕ ಬ್ಯಾಂಕ್ ಶಾಖೆಯ ಶೆಟರ್ ಮುರಿದು ಕಳ್ಳತನಕ್ಕೆ ಮತ್ತು ಎಟಿಎಂ ಒಳ ಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣವನ್ನು 72 ಗಂಟೆಯೊಳಗೆ ಬೇಧಿಸುವಲ್ಲಿ ಯಶಸ್ವಿಯಾಗಿರುವ ಕುಂದಾಪುರ ಪೊಲೀಸರು, ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಕೋಣಿ ಬ್ಯಾಂಕ್ ಕಳ್ಳತನದ ಪ್ರಯತ್ನದ ಪ್ರಕರಣದ ಜೊತೆಗೆ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳ ಶೀಘ್ರ ಪತ್ತೆಗಾಗಿ ಮತ್ತು ರಾತ್ರಿ ಸಮಯದಲ್ಲಿ ತುರ್ತು ಸ್ಪಂದಿಸಿದ ಕುಂದಾಪುರ ಪೊಲೀಸರನ್ನು ಕರ್ಣಾಟಕ ಬ್ಯಾಂಕ್ ಅಧಿಕಾರಿಗಳು ಅಭಿನಂದಿಸಿ ಗೌರವಿಸಿದರು
ಕಳ್ಳತನ ಪ್ರಕರಣವನ್ನು ಬೇಧಿ ಸುವಲ್ಲಿ ಶ್ರಮಿಸಿದ ಕುಂದಾಪುರ ಪೊಲೀಸ್ ವೃತ್ತನಿರೀಕ್ಷಕ ನಂಜಪ್ಪ ಎನ್., ಉಪನಿರೀಕ್ಷಕರಾದ ವಿನಯ ಕೊರ್ಲಹಳ್ಳಿ ಮತ್ತು ಪುಷ್ಪಾ ಹಾಗೂ ಅಪರಾಧ ಸಿಬ್ಬಂದಿಗಳಾದ ಮೋಹನ ಪೂಜಾರಿ, ಶ್ರೀಧರ, ಘನಶ್ಯಾಮ್, ಸಂತೋಷ ಕುಮಾರ್, ರಮೇಶ, ಮಹಾಬಲ ಶೆಟ್ಟಿಗಾರ್ ಹಾಗೂ ಚಾಲಕ ಮಾಧವ ಅವರನ್ನು
ಕರ್ಣಾಟಕ ಬ್ಯಾಂಕಿನ ಎಜಿಎಂ ವಾದಿರಾಜ ಭಟ್, ಚೀಫ್ ಮ್ಯಾನೇಜರ್ ಮನೋಜ್ ಕೋಟ್ಯಾನ್, ವಿಷ್ಣುಮೂರ್ತಿ ಉಪಾಧ್ಯಾಯ, ಶಾಖಾ ವ್ಯವಸ್ಥಾಪಕರಾದ ‘ರಾಘವೇಂದ್ರ ನಾಯ್ಕ ಮತ್ತು ಗಣೇಶ ಹೊಳ್ಳ ಅವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಭಿನಂದಿಸಿ ಗೌರವಿಸಿದರು.