ಕುಂದಾಪುರ : ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ ಇದರ ನೇತೃತ್ವದಲ್ಲಿ ಭಜನಾ ಮಂಡಳಿಯ ಬಗ್ಗೆ ಹಾಗೂ ಭಜಕರ ಬಗ್ಗೆ ನಿಂದನೆ ಮಾಡಿದವರ ವಿರುದ್ಧ ಕುಂದಾಪುರ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರೊಂದಿಗೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು
ತಾಲೂಕು ಒಕ್ಕೂಟದ ಅಧ್ಯಕ್ಷ ನಿತಿನ್ ವಿಠಲವಾಡಿ, ಗೌರವ ಅಧ್ಯಕ್ಷ ಜಯಕರ್ ಪೂಜಾರಿ ಗುಲ್ವಾಡಿ, ಕಾರ್ಯಧ್ಯಕ್ಷ ಚಂದ್ರಶೇಖರ್ ಶೆಟ್ಟಿಯಳೂರು ಹಕ್ಲಾಡಿ, ಕಲಾ ಕ್ಷೇತ್ರದ ಟ್ರಸ್ಟ್ನ ಅಧ್ಯಕ್ಷ ಕಿಶೋರ್ ಕುಮಾರ್, ಮಹಾಜನ ಸಭಾದ ಅಧ್ಯಕ್ಷ ಸಚಿನ್ ನಕತ್ತಾಯ, ಕುಂದಾಪುರ ವಲಯದ ಅಧ್ಯಕ್ಷ ಅಣ್ಣಯ್ಯ ಖಾರ್ವಿ, ವಂಡ್ಸೆವಲಯದ ಅಧ್ಯಕ್ಷ ಸಂತೋಷ್ ಪೂಜಾರಿ, ಬೈಂದೂರು ವಲಯದ ಪ್ರಮುಖ ಸುಬ್ರಮಣ್ಯ ನಾವುಂದ, ಕೋಡಿ ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಹಾಗೂ ಕುಂದಾಪುರ ತಾಲೂಕಿನ ಭಜಕರು ಉಪಸ್ಥಿತರಿದ್ದರು