Home » ಕನ್ನಡ ರಾಜ್ಯೋತ್ಸವ- ಶತಕಂಠ ಗಾಯನ
 

ಕನ್ನಡ ರಾಜ್ಯೋತ್ಸವ- ಶತಕಂಠ ಗಾಯನ

by Kundapur Xpress
Spread the love

ಕುಂದಾಪುರ : ಇಲ್ಲಿನ ಡಾ| ಬಿ. ಬಿ ಹೆಗ್ಡೆ ಪ್ರಥಮ ರ‍್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ, ಕನ್ನಡ ಗೀತ ಗಾಯನ ಹಾಗೂ ವಿದ್ಯರ‍್ಥಿಗಳಿಂದ ಶತಕಂಠ ಗಾಯನ ನಡೆಯಿತು.
ಮುಖ್ಯ ಅತಿಥಿ ಮೂಡುಬಿದರೆ ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಕೃಷ್ಣರಾಜ ಕರಬ ಅವರು ಮಾತನಾಡಿ, ಅನೇಕ ಪ್ರಾದೇಶಿಕ ಭಾಷೆಗಳಿಂದ ಕೂಡಿದ ಕನ್ನಡ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದು. ಇದು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಭೂಯಿಷ್ಟವಾದ ಭಾಷೆ . ರ‍್ತಮಾನದ ದಿನಗಳಲ್ಲಿ ಆಸ್ಟ್ರೇಲಿಯಾ, ಜಪಾನ್ ಮುಂತಾದ ದೇಶಗಳಲ್ಲಿ ಕನ್ನಡವನ್ನು ಬಳಸುತ್ತಿದ್ದಾರೆ. ಆದರೆ ತಾಯ್ನಾಡಿನಲ್ಲಿ ಕನ್ನಡದ ಬಳಕೆ ಬಗ್ಗೆ ಹಿರಿಯರು ಅಸಡ್ಡೆ ತೋರುತ್ತಿರುವುದು ವಿರ‍್ಯಾಸ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ ಉಮೇಶ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನ ನರ‍್ವಹಣೆಯ ಸಂರ‍್ಭ ಮಾತೃಭಾಷೆ ಬಳಕೆಯ ಮಹತ್ವದ ಕುರಿತು ತಿಳಿಸಿದರು.
ಇದೇ ಸಂರ‍್ಭ ಕನ್ನಡ ಸಂಘ ವಿದ್ಯರ‍್ಥಿಗಳಿಗಾಗಿ ಆಯೋಜಿಸಿದ ಕನ್ನಡ ಗೀತ ಗಾಯನ ಸ್ರ‍್ಧೆಯಲ್ಲಿ ವಿಜೇತರದ ವಿದ್ಯರ‍್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನೂರು ವಿದ್ಯರ‍್ಥಿಗಳು ಸೇರಿ ಹಾಡಿದ ಶತಕಂಠ ಗಾಯನ ಗಮನ ಸೆಳೆಯಿತು. ಸಭಾ ಕಾರ‍್ಯಕ್ರಮದಲ್ಲಿ ವಿದ್ಯರ‍್ಥಿಗಳಾದ ಸುಜಯ್ ಕುಮಾರ್ ಶೆಟ್ಟಿ, ಮಾನಸ, ಸನ್ಮಿತಾ ಶೆಟ್ಟಿ, ಕನ್ನಡ ಕರಾವಳಿ ಪರಿಸರದ ಕವಿಗಳಾದ ಶಿವರಾಮ ಕಾರಂತ, ಮೊಗೇರಿ ಗೋಪಾಲಕೃಷ್ಣ ಅಡಿಗ ಹಾಗೂ ವೈದೇಹಿಯವರ ಕುರಿತು ವಿಚಾರ ಮಂಡಿಸಿದರು.
ಕಾಲೇಜಿನ ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕನ್ನಡ ಸಂಘದ ಸಂಯೋಜಕ ಸುಕುಮಾರ್ ಶೆಟ್ಟಿ ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯರ‍್ಥಿನಿ ಸುಪ್ರಿಯಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಕನ್ನಡ ಸಂಘದ ಸಹ ಸಂಯೋಜಕಿ ಶ್ವೇತಾ ಬಿ. ವಂದಿಸಿದರು.

   

Related Articles

error: Content is protected !!