Home » ವಸತಿ ವಿದ್ಯಾರ್ಥಿಗಳ ದೀಪಾವಳಿ ಕಾರ್ಯಕ್ರಮ
 

ವಸತಿ ವಿದ್ಯಾರ್ಥಿಗಳ ದೀಪಾವಳಿ ಕಾರ್ಯಕ್ರಮ

by Kundapur Xpress
Spread the love
ವಕ್ವಾಡಿ : ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ವಸತಿ ವಿದ್ಯಾರ್ಥಿಗಳ ದೀಪಾವಳಿ ಕಾರ್ಯಕ್ರಮದಲ್ಲಿ ಸಂವೇದನಾ ಫೌಂಡೇಶನ್ ಸಂಸ್ಥಾಪಕರು, ಉದ್ಯಾನ ವಿನ್ಯಾಸಕರು, ಚಿಂತಕರು  ಆದ ಶ್ರೀ.ಪ್ರಕಾಶ್ ಮಲ್ಪೆ ಇವರು ತಮ್ಮ ಅತಿಥಿ ಭಾಷಣದಲ್ಲಿ ಮಾತನಾಡಿ,ಮೊತ್ತ ಮೊದಲ ಭಾಷೆ ಸಂಸ್ಕೃತವನ್ನು ಜಗತ್ತಿಗೆ ಕಲಿಸಿದವರು ಭಾರತೀಯರು. ಹಾಗಾಗಿ ಜಗತ್ತಿನ ಎಲ್ಲಾ ಭಾಷೆಗಳಲ್ಲಿಯೂ ಸಂಸ್ಕೃತ ಭಾಷೆಯ ಪ್ರಭಾವ ಇದೆ , ಹಾಗಾಗಿ ಬೇರೆ ಭಾಷೆಗಳನ್ನು ಟೀಕಿಸದೆ, ನಮ್ಮ ಭಾಷೆಯ ಔನತ್ಯ ತೋರಬೇಕು. ಗಣಿತ, ರಾಸಾಯನ, ಭೌತ, ವಿಜ್ಞಾನ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಭಾಷೆ ನಮ್ಮ ಸಂಸ್ಕೃತಿಯಾಗಿದೆ. ಭಾಷೆಯಲ್ಲಿ ಭಗವಂತ ಇದ್ದಾನೆ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದವರು ಭಾರತೀಯರು. ಹಬ್ಬದ ಆಚರಣೆಯ ಹಿಂದೆ ಪ್ರಕೃತಿಯನ್ನು ಕಾಣುವ ಉತ್ಕೃಷ್ಟ ಕಲ್ಪನೆ ನಮ್ಮಲ್ಲಿ ಇದೆ ಎಂದು ವಿಶ್ಲೇಷಿಸಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ವೈಭವ ಹಾಗೂ ಪರಂಪರೆಯನ್ನು ಪರಿಚಯಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಂಡ್ಯಾ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ.ಅನುಪಮಾ ಎಸ್ ಶೆಟ್ಟಿ ಅವರು, ವಿದ್ಯಾರ್ಥಿಗಳು ಜ್ಞಾನಾರ್ಜನೆಯ ತುಂಬಿಕೊಂಡು ಅದನ್ನು ಇತರರಿಗೆ ಹಂಚಬೇಕು. ಸಂಸ್ಕೃತಿ ಹಾಗೂ ಭಾರತೀಯ ಹಬ್ಬಗಳ ಆಚರಣೆಯ ಅರಿವು ನಮ್ಮ ಮಕ್ಕಳಿಗೆ ಆಗಬೇಕು ಎನ್ನುವ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಮಾಸ್ಟರ್ . ರಿಷಬ್ ನಿರೂಪಿಸಿ, ಮಾಸ್ಟರ್.ಭರತ್ ಸ್ವಾಗತಿಸಿ, ಕುಮಾರಿ .ಚಂದನಾ ವಂದಿಸಿದರು,
ಅತಿಥಿ ಪರಿಚಯವನ್ನು ಸಹಶಿಕ್ಷಕಿ ಮಮತಾ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ಗುರುಕುಲ ವಿದ್ಯಾಸಂಸ್ಥೆಯ ವಸತಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಾಂಡ್ಯಾ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯ ನಿರ್ವಾಹಕರಾದ ಶ್ರೀ.ಸುಭಾಶ್ಚಂದ್ರ ಶೆಟ್ಟಿ , ಶಾಲಾ ಹಾಗೂ ಕಾಲೇಜು ಪ್ರಾಂಶುಪಾಲರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
   

Related Articles

error: Content is protected !!