Home » ಕಳವು ಪ್ರಕರಣ : ಮೂವರ ಬಂಧನ
 

ಕಳವು ಪ್ರಕರಣ : ಮೂವರ ಬಂಧನ

by Kundapur Xpress
Spread the love

ಉಡುಪಿ : ಶಿವಳ್ಳಿ ಗ್ರಾಮದ ಬೇಕ್ ಲೇನ್ ಬೇಕರಿ ಹಾಗೂ ಈಶ್ವರ ನಗರದ ಆದಿಶಕ್ತಿ ಜನರಲ್ ಸ್ಟೋರ್ಸ್ ನ ಶೆಟರ್ ಒಡೆದು ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕೊಪ್ಪಳ ಜಿಲ್ಲೆಯ ಗಜೇಂದ್ರಗಡದ ನಿವಾಸಿ ಮಂಜುನಾಥ್ ಚಿದಾನಂದಪ್ಪ ನರತೆಲಿ(24) ಉಡುಪಿ ಜಿಲ್ಲೆಯ ಹಟ್ಟಿಯಂಗಡಿಯ ನಿವಾಸಿಗಳಾದ ಪ್ರಸಾದ್(22) ಕಿಶನ್(20) ಬಂಧಿತ ಆರೋಪಿಗಳು

ಈ ಮೂವರು ಆರೋಪಿಗಳು ಅ.31ರಂದು ರಾತ್ರಿ ಬೇಕ್ ಲೇನ್ ಬೇಕರಿ ಹಾಗೂ ಈಶ್ವರನಗರದ ಆದಿಶಕ್ತಿ ಜನರಲ್ ಸ್ಟೋರ್ಸ್ ನ ಶೆಟ‌ರ್ ಒಡೆದು 60 ಸಾವಿರ ರೂ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಮಣಿಪಾಲದ ಶಿಂಬ್ರಾ ಬ್ರಿಡ್ಜ್ ಬಳಿ ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಸುಮಾರು 5,00,000/- ರೂ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ 

   

Related Articles

error: Content is protected !!