Home » ಹರಿಣಗಳ ವಿರುದ್ದ ಜಯ ಸಾಧಿಸಿದ ಭಾರತ
 

ಹರಿಣಗಳ ವಿರುದ್ದ ಜಯ ಸಾಧಿಸಿದ ಭಾರತ

by Kundapur Xpress
Spread the love

ಡರ್ಬನ್ : ಇಲ್ಲಿನ ಡರ್ಬನ್ ಕ್ರೀಡಾಂಗಣದಲ್ಲಿ ನಿನ್ನೆ ಶುಕ್ರವಾರ ನಡೆದ ಟಿ – 20 ಪಂದ್ಯಾಟದಲ್ಲಿ ದ. ಆಫ್ರಿಕಾದ ವಿರುದ್ದ ಭಾರತ ಜಯ ಸಾಧಿಸಿದೆ ಮೊದಲು ಬ್ಯಾಟಂಗ್‌ ನಡೆಸಿದ ಭಾರತ ತಂಡ 20 ಓವರ್‌ ಗಳಲ್ಲಿ 202 ರನ್‌ ಕಲೆಹಾಕಿತು ಸವಾಲಿನ ಗುರಿಯನ್ನು ಬೆನ್ನಟ್ಟಿದ ದ.ಆಫ್ರಿಕಾ 17.5 ಓವರ್‌ ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 141 ರನ್‌ ರನ್‌ ಗಳಿಸಿ ಶರಣಾಯಿತು 

ಶುಕ್ರವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ-20 ಪಂದ್ಯ ಭಾರತದ ಬ್ಯಾಟರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾಯಿತು. ಮೊದಲ ಓವರ್ ನಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ಭಾರತ ಪಂದ್ಯದಲ್ಲಿ ಕಲೆಹಾಕಿದ್ದು 202 ರನ್. ಇದರಲ್ಲಿ ಸಂಜು ಸ್ಯಾಮ್ಸನ್‌ ಗಳಿಕೆ 107 ಅಭಿಷೇಕ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಸಂಜು ಕೇವಲ 47 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 10 ಸಿಕ್ಸರ್‌ಗಳಿದ್ದವು.

ಡರ್ಬನ್ ಕ್ರೀಡಾಂಗಣ ಸಂಜು ಸ್ಯಾಮ್ಸನ್‌ ದರ್ಬಾರ್‌ಗೆ ಸಾಕ್ಷಿಯಾಯಿತು. ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ  ಸ್ಯಾಮ್ಸನ್‌ ಸ್ಫೋಟಕ ಶತಕ ಸಿಡಿಸಿದ್ದು ಸತತ 2 ಟಿ-20 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತ ಮೊದಲ ಬ್ಯಾಟರ್ ಎಂಬ ವಿಶೇಷ ದಾಖಲೆ ಬರೆದಿದ್ದಾರೆ.

ಸಂಜು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲೂ ಶತಕ ಬಾರಿಸಿದ್ದರು. ಈ ಮೂಲಕ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. 

 

Related Articles

error: Content is protected !!