ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ಚಟುವಟಿಕೆಗಳನ್ನು ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ದೇವೇಂದ್ರನಾಯಕ್ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಸೇವಾ ಮನಸ್ಥಿತಿ ಇದ್ದಾಗ ಮಾತ್ರ ಬಲಾಡ್ಯ ದೇಶ ನಿರ್ಮಾಣ ಸಾಧ್ಯ ಎಂದರು .
ತ್ರಿಶಾ ವಿದ್ಯಾ ಕಾಲೇಜಿನ ಎನ್ಎಸ್ಎಸ್(NSS) ಘಟಕಗಳ ಪ್ರಸ್ತುತ ವರ್ಷದ ಯೋಜನೆಯಾದ ಎಸ್.ವಿ.ಎಸ್ ಕನ್ನಡ ಮಾಧ್ಯಮ ಶಾಲೆಯ ಶೈಕ್ಷಣಿಕ ಅಭಿವೃದ್ಧಿಯ ವಿನೂತನ ಕಾರ್ಯಕ್ರಮ “ಅಗ್ರಣಿ” ಯನ್ನು ಎಸ್.ವಿ.ಎಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಧರ ಎನ್ ಎಸ್ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿ ನಮಿತಾ ಜಿ ಭಟ್ ವಹಿಸಿದ್ದರು. ವೇದಿಕೆಯಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿಗಳಾದ ಪ್ರೊ. ರೆನಿಟಾ ಡಿಸೋಜ ಮತ್ತು ಪ್ರೊ .ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ನಿಶಿತಾ ಸ್ವಾಗತಿಸಿ,ಅನಿಲ್ ವಂದಿಸಿ, ರಿಝಾ ರಜಾಕ್ ನಿರೂಪಿಸಿದರು.