ಬಳ್ಳಾರಿ : ದೇಶದಲ್ಲಿಯೇ ಮೊದಲ ಬಾರಿಗೆ ನಾನು ‘ಭಾಗ್ಯಲಕ್ಷ್ಮೀ’ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಈಗ ಈ ಬಾಂಡ್ಗಳು ಮೆಚ್ಯುರಿಟಿಗೆ ಬಂದಿದ್ದರೂ ಅದನ್ನು ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಆದರೆ ನಾನು ಬಿಡುವುದಿಲ್ಲ ಹೋರಾಟ ಮಾಡಿಯಾದರೂ ಆ ಹಣವನ್ನು ಕೊಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಭರವಸೆ ನೀಡಿದ್ದಾರೆ
ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅವರು ಭರ್ಜರಿ ಪ್ರಚಾರ ನಡೆಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ದೃಷ್ಟಿಯಿಂದ ‘ನಾನು ಈ ಯೋಜನೆಯನ್ನು ಚಾರಿಗೆ ತಂದಿದ್ದೇನೆ. ಕಳೆದ ಏಪ್ರೀಲ್ ತಿಂಗಳಿನಿಂದಲೇ ಭಾಗ್ಯಲಕ್ಷ್ಮೀ ಬಾಂಡ್ಗಳು ಮೆಚ್ಯುರಿಟಿಗೆ ಬಂದಿವೆ. ಆದರೆ, ಇದನ್ನು ಕೊಡಲು ಸರ್ಕಾರದ ಬಳಿ ಹಣವೇ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನೋಪಯೋಗಿ ಕೆಲಸಗಳು ಜಾರಿಯಾಗುತ್ತಿಲ್ಲ. ಆದರೆ ನಾನು ಬಿಡುವುದಿಲ್ಲ ಹೋರಾಟ ಮಾಡಿಯಾದರೂ ಆ ಹಣವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು