ಚಿಕ್ಕಮಗಳೂರು : ಆಧುನಿಕ ಭಸ್ಮಾಸುರನಂತಿರುವ ಕಾಂಗ್ರೆಸ್ ನಾಶಕ್ಕೆ ಮೋಹಿನಿ ಅವತಾರ ತಾಳುವ ಅವಶ್ಯಕತೆ ಇದೆ. ನಮ್ಮಿಂದ ಅಧಿಕಾರ ಪಡೆದು ನಮ್ಮ ಆಸ್ತಿ ಕಬಳಿಸಲು ಬಿಡಬೇಕಾ ? ಭಸ್ಮಾಸುರ ಕೊನೆಯಾಗಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ ಕರ್ನಾಟಕದ ಹಣ ಎಟಿಎಂ ಮಾಡಿಕೊಂಡಿದ್ದಾರೆ. ಜನ ಅಧಿಕಾರ ಕೊಟ್ಟರು. ಕಾಂಗ್ರೆಸ್ ಜನರ ತಲೆ ಮೇಲೆ ಕೈ ಇಡುತ್ತಿದೆ. ರೈತರ ಆಸ್ತಿ, ದೇವಾ ಲಯ, ಸ್ಮಶಾನ ನಮ್ಮದು ಎಂದು ವಕ್ಸ್ ಹೇಳುತ್ತಿದೆ ಶ್ರೀರಾಮುಲು ವಿರುದ್ಧ ತನಿಖೆ ನಡೆಸಲು ಮುಂದಾಗಿದೆ. ಒಂದೂವರೆ ವರ್ಷದಿಂದ ಸುಮ್ಮನಿದ್ದ ಸರ್ಕಾರ ಈಗ ಮುಂದಾಗಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.