ಅಕ್ರಮ ಲಕ್ಕಿ ಡ್ರಾ : ಆರೋಪಿಯ ಬಂಧನ
ಉಡುಪಿ : ವ್ಯಾಟ್ಸಾಪ್ನಲ್ಲಿ ಗ್ರೂಪ್ ಮಾಡಿಕೊಂಡು ಆಕ್ರಮವಾಗಿ ಲಕ್ಕಿ ಡ್ರಾ ನಡೆಸುತ್ತಿದ್ದ ವ್ಯಕ್ತಿಯನ್ನು ಸೆನ್ ಠಾಣಾ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿರ್ವ ಗ್ರಾಮದ ಮನೋಜ್ (31) ಎಂದು ಗುರುತಿಸಲಾಗಿದೆ. ಶಿರ್ವ ಪೇಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೋರಿ ಲಕ್ಕಿ ಡ್ರಾ ಎಂಬ 340 ಜನ ಇರುವ ವಾಟ್ಸಪ್ ಗ್ರೂಪ್ ಮಾಡಿಕೊಂಡು ಕೋಳಿಯನ್ನು ಅಥವಾ ಕ್ಯಾಶ್ ಬ್ಯಾಕ್ ರೂಪದಲ್ಲಿ ಬಹುಮಾನ ನೀಡುತ್ತಿದ್ದ ಎನ್ನಲಾಗಿದೆ
ಶಾಲಾ ಮಕ್ಕಳಿದ್ದ ರಿಕ್ಷಾ ಪಲ್ಟಿ
ಶಾಲಾ ಮಕ್ಕಳನ್ನು ಕರದೊಯ್ಯುತ್ತಿದ್ದ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕೆಳ ಪರ್ಕಳದ ಈಶ್ವರ ನಗರದಲ್ಲಿ ಸಂಜೆ ವೇಳೆ ನಡೆದಿದೆ. ಮಣಿಪಾಲ ಮಾಧವ ಕೃಷ್ಣಾ ಶಾಲೆಯ ಮಕ್ಕಳನ್ನು ಸಂಜೆ ಮನೆಗೆ ಕರೆ ತರುತ್ತಿದ್ದ ವೇಳ ಮಣಿಪಾಲದಿಂದ ಪರ್ಕಳದ ಕಡೆ ಹೋಗುತ್ತಿದ್ದ ರಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯತನ್ನಲಾಗಿದೆ. ಇದರಿಂದ ರಿಕ್ಷಾದಲ್ಲಿದ್ದ ಮೂವರು ಮಕ್ಕಳಿಗೆ ಗಾಯಗಳಾಗಿರುವ ಬಗ್ಗೆ ತಿಳಿದುಬಂದಿದೆ
ಬಾವಿಗೆ ಹಾರಿ ಆತ್ಮಹತ್ಯೆ
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಗುಜ್ಜಾಡಿ ಗ್ರಾಮದ ರಮೇಶ (41) ಎಂಬವರು ಜೀವನದಲ್ಲಿ ಜಿಗುಪ್ಪೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 3 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ರಮೇಶ ಅವರು ಮಣಿಪಾಲ ಆಸ್ಪತ್ರೆ. ಕುಂದಾಪುರ ಸರ್ಕಾರಿ ಆಸ್ಪತ್ರೆ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ