Home » ತ್ರಿಶಾ ಕಾಲೇಜು ಮಂಗಳೂರು ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಯೊಂದಿಗೆ (ಕೆಸಿಸಿಐ) ಒಡಂಬಡಿಕೆ
 

ತ್ರಿಶಾ ಕಾಲೇಜು ಮಂಗಳೂರು ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಯೊಂದಿಗೆ (ಕೆಸಿಸಿಐ) ಒಡಂಬಡಿಕೆ

by Kundapur Xpress
Spread the love

ಮಂಗಳೂರು : ತ್ರಿಶಾ ಕಾಲೇಜು ಹಾಗೂ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಯೊಂದಿಗೆ (ಕೆಸಿಸಿಐ) ಒಡಂಬಡಿಕೆ ಮಾಡಿಕೊಂಡಿದ್ದು ಈ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನವೆಂಬರ್ 8 ರಂದು ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಕೆಸಿಸಿಐ ಅಧ್ಯಕ್ಷರು ಶ್ರೀ ಆನಂದ್ ಜಿ ಪೈ,  ಉಪನ್ಯಾಸ ನೀಡಿ, ಉದ್ಯಮ ಮತ್ತು ಶಿಕ್ಷಣದ ಸಹಭಾಗಿತ್ವವು ವಿದ್ಯಾರ್ಥಿಗಳನ್ನು ವೃತ್ತಿ ಜಗತ್ತಿಗೆ ಸಿದ್ಧಗೊಳಿಸುವುದರ ಮಹತ್ವವನ್ನು ತಿಳಿಸಿದರು. ಕೆಸಿಸಿಐ ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳಿಗೆ ಸಹಾಯ ಮಾಡುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್,  ಅವರು ಮಾತನಾಡಿ ಈ ಒಡಂಬಡಿಕೆಯು ವಿದ್ಯಾರ್ಥಿಗಳ ಅನುಭವಾತ್ಮಕ  ಕಲಿಕೆಗೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ.ನಾರಾಯಣ್ ಕಾಯರ್ ಕಟ್ಟೆ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ ಕಾಮತ್ ಎಂ. ಸ್ವಾಗತಿಸಿ, ಪ್ರಾಧ್ಯಾಪಕಿ ಅನುಷಾ ಟಿ ನಿರೂಪಿಸಿ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರು ಪ್ರೊ. ಸುಪ್ರಭಾ ಎಂ ವಂದಿಸಿದರು.

   

Related Articles

error: Content is protected !!