Home » ಆನೆಗುಡ್ಡೆ ದೇವಳಕ್ಕೆ ವಿಜಯ್‌ ಸಂಕೇಶ್ವರ್‌ ಭೇಟಿ
 

ಆನೆಗುಡ್ಡೆ ದೇವಳಕ್ಕೆ ವಿಜಯ್‌ ಸಂಕೇಶ್ವರ್‌ ಭೇಟಿ

by Kundapur Xpress
Spread the love

ಆನೆಗುಡ್ಡೆ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ವಿ. ಆರ್.ಎಲ್. ಸಮೂಹ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ ಇವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಹಾಗೂ ಧರ್ಮದರ್ಶಿ ಶ್ರೀ ಕೆ.ನಿರಂಜನ ಉಪಾಧ್ಯಾಯ  ಅವರನ್ನು ದೇವಸ್ಥಾನದ ಪರವಾಗಿ ಸ್ವಾಗತಿಸಿ ಗೌರವಿಸಿದರು.

ಪರ್ಯಾಯ ಅರ್ಚಕರಾದ ಕೆ ಕೃಷ್ಣಾನಂದ ಉಪಾಧ್ಯಾಯ ಹಾಗೂ ಸಹೋದರರು ಶ್ರೀದೇವರ ಪ್ರಸಾದವನ್ನು ನೀಡಿ ಆಶೀರ್ವದಿಸಿದರು ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ದೇವಳದ ಮೆನೇಜರ್‌ ನಟೇಶ್‌ ಕಾರಂತ್‌ ಹಾಗೂ ಸಿಬ್ಬಂದಿಗಳು ಮತ್ತು ಅರ್ಚಕ ವೃಂದದವರು ಉಪಸ್ಥಿತರಿದ್ದರು

 

Related Articles

error: Content is protected !!