ಉಡುಪಿ : ಕರ್ನಾಟಕ ರಾಜ್ಯ ಯುವ ಬರಹಗಾರರ ಬಳಗ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಸಂಸ್ಮರಣೆ ಯ ಅಂಗವಾಗಿ ಜಿಲ್ಲಾ ಮಟ್ಟದ ಪ್ರಥಮ ಕವಿಗೋಷ್ಠಿಯನ್ನು ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಆಸಕ್ತ ಕವಿ-ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಜಿ.ಎಸ್. ಕಿರಣ್ ಕುಮಾರ್ ತಿಳಿಸಿದ್ದಾರೆ.
ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಜಿಲ್ಲೆಯ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು ಯಾವುದೇ ವಸ್ತು ವಿಷಯ ಕುರಿತು ರಚಿಸಿದ, ತಮ್ಮ ಸ್ವ-ರಚಿತ 20 ಸಾಲುಗಳ ಮಿತಿಯೊಳಗಿನ ಎರಡು ಕವಿತೆಗಳು / ಗಜಲ್ ಗಳನ್ನು ಅಥವಾ 6 ಸಾಲಿನ ಮಿತಿಯೊಳಗಿನ ಆರು ಚುಟುಕು / ಹನಿಗವಿತೆಗಳನ್ನು ಕಳುಹಿಸಿಕೊಡಬೇಕು. ಆಯ್ಕೆಯಾದ ಕವಿತೆಗಳ ಕವಿಗಳಿಗೆ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಭಾಗವಹಿಸುವ ಎಲ್ಲಾ ಕವಿಗಳಿಗೂ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
ಆಸಕ್ತ ಕವಿಗಳು ದಿನಾಂಕ 30-11-2024 ರೊಳಗೆ ತಲುಪುವಂತೆ ಸ್ವರಚಿತ ಎರಡು ಕವಿತೆಗಳನ್ನು ತಮ್ಮ ಸಂಕ್ಷಿಪ್ತ ಪರಿಚಯದೊಂದಿಗೆ ಜಿ.ಎಸ್. ಕಿರಣ್ ಕುಮಾರ್, ಜಿಲ್ಲಾಧ್ಯಕ್ಷರು, ಕರ್ನಾಟಕ ಯುವ ಬರಹಗಾರರ ಬಳಗ(ರಿ.), ಉಡುಪಿ, ಶ್ರೀ ಅನ್ನಪೂರ್ಣೇಶ್ವರಿ ನಿಲಯ, ಬೊಬ್ಬರ್ಯ ದೈವಸ್ಥಾನ ರಸ್ತೆ, ಉಪ್ಪಿನಕುದ್ರು, ಕುಂದಾಪುರ ತಾಲ್ಲೂಕು – 576230 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9591217410 / 8152055770 ಅಥವಾ [email protected] ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧ್ಯಕ್ಷರ ಪ್ರಕಟಣೆ ತಿಳಿಸಿದೆ