Home » ನಿವೃತ್ತ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಬೀಳ್ಕೊಡುಗೆ,ಗೌರವ
 

ನಿವೃತ್ತ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಬೀಳ್ಕೊಡುಗೆ,ಗೌರವ

by Kundapur Xpress
Spread the love

ಕೋಟ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಮುಖ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿವ ಎಸ್ ನಾಯ್ಕ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಸೇವಾ ನಿವೃತ್ತಿಯ ಪ್ರಯುಕ್ತ ಬೀಳ್ಕೊಡಗೆ ಏರ್ಪಡಿಸಲಾಯಿತು.

ಸಭೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ. ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸದಸ್ಯರುಗಳಾದ ಕೆ.ರಾಜು ಪೂಜಾರಿ,ಸಂಜೀವ ದೇವಾಡಿಗ, ರವೀಂದ್ರ ಕಾಮತ್ ,ಅನಸೂಯ ಹೇರ್ಳೆ, ಪ್ರತಿಪಕ್ಷ ನಾಯಕರಾದ ಶ್ರೀನಿವಾಸ ಅಮೀನ್ ಮೊದಾಲಾದವರುಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಶಿವನಾಯ್ಕ ಮತ್ತು ದಂಪತಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು. ಅಲ್ಲದೇ ಸಿಬ್ಬಂದಿಗಳು ಶೋಬಾನೆ ಹಾಡಿ, ಬೆಳ್ಳಿಯ ಆರತಿ ಬೆಳಗಿದರು. ಕಛೇರಿ ಸಿಬ್ಬಂದಿ ಸುಮಿತ್ರ ಸ್ವಾಗತಿಸಿದ್ದರು. ಪಟ್ಟಣ ಪಂಚಾಯತ್ ಸಿಬ್ಬಂದಿ ಕೆ.ಚಂದ್ರಶೇಖರ ಸೋಮಯಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಘಟಿಸಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.

 

Related Articles

error: Content is protected !!