Home » ಗಯಾನದಲ್ಲಿ ಭಾರತೀಯರ ಸ್ವಾಗತ
 

ಗಯಾನದಲ್ಲಿ ಭಾರತೀಯರ ಸ್ವಾಗತ

ಅತ್ಯುನ್ನತ ಪ್ರಶಸ್ತಿ ಘೋಷಿಸಿದ ಗಯಾನ‌,ಬಾರ್ಬಡೋಸ್

by Kundapur Xpress
Spread the love

ಜಾರ್ಜ್‌ ಟೌನ್‌ (ಗಯಾನಾ) : ವಿದೇಶ ಪ್ರವಾಸದ ಭಾಗವಾಗಿ ಗಯಾನಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ವಲಸಿಗರು ಅದ್ದೂರಿಯಾಗಿ ಸ್ವಾಗತಿಸಿದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನ ಮತ್ತು ಬಾರ್ಬಡೋಸ್‌ನ ಅತ್ಯುನ್ನತ ಪ್ರಶಸ್ತಿ ಘೋಷಿಸಲಾಗಿದೆ. ಗಯಾನ ತನ್ನ ದೇಶದ ಉನ್ನತ ಪ್ರಶಸ್ತಿಯಾದ ದಿ ಆರ್ಡರ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ಘೋಷಿಸಿದ್ದರೆ, ಬಾರ್ಬಡೋಸ್ ತನ್ನ ಪ್ರತಿಷ್ಠಿತ ಪ್ರಶಸ್ತಿಯಾದ ಹಾನರರಿ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್ ಪ್ರಶಸ್ತಿ ಘೋಷಿಸಿದೆ

ಇದು ಭಾರತಕ್ಕೆ ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಈ ವೇಳೆ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದರು. 50 ವರ್ಷಗಳ ಬಳಿಕ ಗಯಾನಾಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡಿದ್ದಾರೆ

 

Related Articles

error: Content is protected !!