ಕೋಟ: ಕನ್ನಡ ಭಾಷಾಭಿಮಾನದ ಜತೆಗೆ ಅದರ ಮೌಲ್ಯಗಳನ್ನು ಉಳಿಸಿ ಬೆಳೆಸುವ ಅಗತ್ಯತೆ ಇದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಅಧ್ಯಕ್ಷೆ ಡಾ.ವಾಣಿಶ್ರೀ ಐತಾಳ್ ನುಡಿದರು.
ಇತ್ತೀಚಿಗೆ ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರ ಇಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಇವರ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾಡುನುಡಿಗೆ ಗೌರವ ಸಲ್ಲಿಸುವ ಮೂಲಕ ಕನ್ನಡ ಭಾಷಾ ಪರಂಪರೆಯನ್ನು ಮುಂದಿನ ತಲೆಮಾರಿನತ್ತ ಕೊಂಡ್ಯೋಯುವ ಅವಶ್ಯಕತೆಯನ್ನು ಮನಗಾಣಿಸಿದರು. ಇದೇ ವೇಳೆ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಸಿಹಿತಿಂಡಿತಿನಿಸುಗಳನ್ನು ವಿತರಿಸಲಾಯಿತು.
ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಪದಾಧಿಕಾರಿಗಳಾದ ಸರಸ್ವತಿ ಜಿ ಪುತ್ರನ್,ಕಲ್ಪನ ಭಾಸ್ಕರ್, ಚಂದ್ರಿಕಾ ಧನ್ಯ,ದೀಪಿಕಾ ಸಾಮಗ,ಆಶಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯಸ್ಥರು, ಆಡಳಿತ ಮಂಡಳಿ, ಹಾಗೂ ಅಧ್ಯಾಪಕವೃಂದ ಸಹಕರಿಸಿದರು.ಮುಖ್ಯಸ್ಥರು ಕೃಷ್ಣ ಶಾನುಬಾಗ್,ತೀರ್ಪುಗಾರರಾಗಿ ರೇಷ್ಮಾ ಶೇಟ್ ,ಕುಸುಮಾ ದೇವಾಡಿಗ ಪಾಲ್ಗೊಂಡರು.
ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಇವರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇತ್ತೀಚೆಗೆ ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರ ದಲ್ಲಿ ಆಚರಿಸಲಾಯಿತು.