Home » ಕಾಂಗ್ರೆಸ್ ಪ್ರಾಯೋಜಿತ ವಕ್ಫ್ ಅಕ್ರಮ
 

ಕಾಂಗ್ರೆಸ್ ಪ್ರಾಯೋಜಿತ ವಕ್ಫ್ ಅಕ್ರಮ

ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಆಂದೋಲನ

by Kundapur Xpress
Spread the love

ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಪ್ರಾಯೋಜಿತ ವಕ್ಫ್ ಆಕ್ರಮದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ “ನಮ್ಮ ಭೂಮಿ ನಮ್ಮ ಹಕ್ಕು” ಅಭಿಯಾನದಡಿ ಬೃಹತ್ ಆಂದೋಲನ ನಡೆಯಿತು.

ಬೃಹತ್ ಆಂದೋಲನಕ್ಕೆ ಚಾಲನೆ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸರಕಾರದ ಆಡಳಿತ ವೈಫಲ್ಯ, ವಕ್ಫ್ ಅವಾಂತರ, ಬಿಪಿಎಲ್ ಕಾರ್ಡ್ ರದ್ದತಿ ಹುನ್ನಾರ ಹಾಗೂ ಸರಣಿ ಹಗರಣಗಳ ವಿಚಾರವನ್ನು ಎಳೆ ಎಳೆಯಾಗಿ ಬಿಡಿಸಿ ವಿಸ್ತೃತವಾಗಿ ಮಾತನಾಡಿದರು.

ಬೃಹತ್ ಆಂದೋಲನವನ್ನು ಉದ್ದೇಶಿಸಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಪ್ರಮುಖರಾದ ಶಂಕರ ಅಂಕದಕಟ್ಟೆ, ಬೈಕಾಡಿ ಸುಪ್ರಸಾದ್ ಶೆಟ್ಟಿ, ರಾಘವೇಂದ್ರ ಉಪ್ಪುರು ಮಾತನಾಡಿದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದ ಪದಾಧಿಕಾರಿಗಳ ತಂಡದಿಂದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ವಕ್ಫ್ ಅಕ್ರಮ, ಹಗರಣಗಳ ಸರಮಾಲೆಯನ್ನು ಅಣಕಿಸುವ ಸಾಮೂಹಿಕ ಗೀತೆ ಗಾಯನ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಮತ್ತು ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಸಮಾರೋಪದ ಮಾತುಗಳನ್ನಾಡಿ, ಹಗರಣಗಳ ಕೂಪದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಅಕ್ರಮ, ಬಿಪಿಎಲ್ ಕಾರ್ಡ್ ರದ್ಧತಿ, ಹಿಂದೂ ವಿರೋಧಿ ನೀತಿಗಳ ಮೂಲಕ ಹಿಂದೂ ದಮನ ಕಾರ್ಯದಲ್ಲಿ ತೊಡಗಿದ್ದು ಈ ನಿಟ್ಟಿನಲ್ಲಿ ಬಿಜೆಪಿಯ ಹೋರಾಟಗಳು ಇನ್ನಷ್ಟು ತೀವ್ರಗೊಳ್ಳಬೇಕಾಗಿದೆ ಎಂದರು

ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ದೆ, ತಿಂಗಳೆ ವಿಕ್ರಮಾರ್ಜುನ ಹೆಗ್ದೆ, ಜಿಲ್ಲಾ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಕಿರಣ್ ಕುಮಾರ್ ಬೈಲೂರು, ಮಹಾವೀರ ಹೆಗ್ಡೆ, ಜಯರಾಮ್ ಸಾಲ್ಯಾನ್, ಪೆರಣಂಕಿಲ ಶ್ರೀಶ ನಾಯಕ್, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಪ್ರಮುಖರಾದ ರಾಜೇಶ್ ಕಾವೇರಿ, ರವಿ ಅಮೀನ್, ನಯನಾ ಗಣೇಶ್, ಮನೋಹರ್ ಎಸ್ ಕಲ್ಮಾಡಿ, ರಾಘವೇಂದ್ರ ಕುಂದರ್, ಉದಯ ಎಸ್. ಕೋಟ್ಯಾನ್, ಸದಾನಂದ ಬಳ್ಕೂರ್, ಪ್ರಿಯದರ್ಶಿನಿ ದೇವಾಡಿಗ, ಅನಿತಾ ಶ್ರೀಧರ್, ಗೀತಾಂಜಲಿ ಎಮ್. ಸುವರ್ಣ, ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್. ಅಂಚನ್, ವೀಣಾ ಎಸ್. ಶೆಟ್ಟಿ, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರುಗಳಾದ ವಿಜಯ ಕೊಡವೂರು, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಮಲಾಕ್ಷ ಹೆಬ್ಬಾರ್, ಸಂಧ್ಯಾ ರಮೇಶ್, ಚಂದ್ರ ಪಂಚವಟಿ, ರುಡಾಲ್ಫ್ ಡಿ’ಸೋಜ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲೇಶ್ ಶೆಟ್ಟಿ, ಮಂಡಲಗಳ ಅಧ್ಯಕ್ಷರುಗಳಾದ ದಿನೇಶ್ ಅಮೀನ್ ಉಡುಪಿ, ನವೀನ್ ನಾಯಕ್ ಕಾರ್ಕಳ, ಜಿತೇಂದ್ರ ಶೆಟ್ಟಿ ಕಾಪು, ರಾಜೀವ ಕುಲಾಲ್ ಉಡುಪಿ ಗ್ರಾಮಾಂತರ, ಸುರೇಶ್ ಶೆಟ್ಟಿ ಗೋಪಾಡಿ ಕುಂದಾಪುರ, ದೀಪಕ್ ಕುಮಾರ್ ಶೆಟ್ಟಿ ಬೈಂದೂರು, ಜಿಲ್ಲಾ ಮೋರ್ಚಾಗಳ ಮತ್ತು ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ನಳಿನಿ ಪ್ರದೀಪ್ ರಾವ್, ಅನಿತಾ ಆರ್.ಕೆ., ಶ್ರೀಕಾಂತ್ ಕಾಮತ್, ಎಸ್.ನಾರಾಯಣ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಗೋಪಾಲಕೃಷ್ಣ ರಾವ್ ಮಟ್ಟು, ಸುರೇಶ್ ಶೆಟ್ಟಿ ಶಿವಪುರ, ಸಚಿನ್ ಪೂಜಾರಿ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು, ಸಹ ಸಂಚಾಲಕರು, ಜಿಲ್ಲಾ, ಮೋರ್ಚಾ, ಮಂಡಲ, ಮಹಾ ಶಕ್ತಿಕೇಂದ್ರ ಶಕ್ತಿಕೇಂದ್ರ, ಬೂತ್ ಪದಾಧಿಕಾರಿಗಳು, ವಿವಿಧ ಸ್ತರದ ಜನ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿ, ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ವಂದಿಸಿದರು

   

Related Articles

error: Content is protected !!