Home » 231ನೇ ಪರಿಸರ ಸ್ನೇಹಿ ಅಭಿಯಾನ
 

231ನೇ ಪರಿಸರ ಸ್ನೇಹಿ ಅಭಿಯಾನ

ಕೋಟದ ಪಂಚವರ್ಣ

by Kundapur Xpress
Spread the love

ಕೋಟ: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ ಜಿಲ್ಲೆಗಳಲ್ಲೆ ಹೊಸ ಭಾಷ್ಯ ಬರೆದಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ,ಮಣೂರು ಫ್ರೆಂಡ್ಸ್ ,ಜೆಸಿಐ ಕೋಟ ಸಿನಿಯರ್ ಲಿಜನ್ ,ಕೋಟ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕ ಸಹಯೋಗದೊಂದಿಗೆ ೨೩೧ನೇ ಭಾನುವಾರ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಕೋಟ ಮಣೂರು ಪಡುಕರೆ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡರೆ ಅದು ನಾವುಗಳು ಮುಂದಿನ ಜನಾಂಗಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ,ಪ್ರಸ್ತುತ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಭೂಮಿಗೆ ಬಾರಿ ಸಂಚಕಾರ ತಂದೊಡ್ಡುತ್ತಿದೆ,ಇದರಿAದ ಭೂಮಿಯಲ್ಲಿನ ಬೆಳೆಗಳಿಙದ ಹಿಡಿದು ಗಾಳಿ ನೀರಿಗೆ ವಿಷಕಾರಿಯಾಗುವುದರ ಜತೆಗೆ ಹಾನಿಯುಂಟು ಮಾಡುತ್ತಿದೆ ಈ ಹಿನ್ನಲ್ಲೆಯಲ್ಲಿ ಎಲ್ಲರೂ ಪ್ರಕೃತಿಯನ್ನು ಉಳಿಸಿ ಬೆಳೆಸಲು ಪಣತೊಡಬೇಕು ಪಂಚವರ್ಣದಂತಹ ಸಂಸ್ಥೆಗಳು ಮತ್ತಷ್ಟು ಈ ಸಮಾಜದಲ್ಲಿ ಹುಟ್ಟಿಕೊಳ್ಳಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಉದ್ಯಮಿ ಸುರೇಶ್ ಕುಂದರ್,ಕೊಸ್ಟಲ್ ಕಾಡ್೯ ಸುದರ್ಶನ್ ಜಟ್ಟಿಗೇಶ್ವರ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಸಂಚಾಲಕ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,ಹಂದಟ್ಟು ಮಹಿಳಾ ಬಳಗದ ಸ್ಥಾಪಾಕಾಧ್ಯಕ್ಷೆ ಪುಷ್ಭಾ ಕೆ.ಹಂದಟ್ಟು,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಕೋಟ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣದ ಸದಸ್ಯ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿದರು.

 

   

Related Articles

error: Content is protected !!