ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಾರ್ಕಳ : ಕಾರ್ಕಳ ನಗರದ ಕುಂಟಲ್ಪಾಡಿ ನಿವಾಸಿಯಾದ ಹರೀಶ್ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಸುಮಾರು 4 ತಿಂಗಳ ಹಿಂದೆ ಊರಿಗೆ ಬಂದಿದ್ದು, 4 ವರ್ಷದ ಹಿಂದೆ ಹೊಸದಾಗಿ ಮನೆ ಕಟ್ಟುವಾಗ ವಿಪರೀತ ಸಾಲ ಮಾಡಿಕೊಂಡಿದ್ದು ಊರಿನಲ್ಲಿ ಸರಿಯಾದ ಕೆಲಸ ಇಲ್ಲದೆ ಇದ್ದು ಹಾಗೂ ವಾಪಾಸು ವಿದೇಶಕ್ಕೆ ಸಹ ಹೋಗದೇ ಇರುವ ಕಾರಣ ವಿಪರೀತ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು ಇದೇ ಕಾರಣದಿಂದಲೊ ಅಥವಾ ಇನ್ಯಾವುದೋ ಕಾರಣದಿಂದ ವಾಸದ ಮನೆಯಾದ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿ ಪ್ಯಾನಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಂತಿ ಮಾಡಿಕೊಂಡ ಯುವಕ ಮೃತ
ಕುಂದಾಪುರ : ಯಡ್ಯಾಡಿ- ಮತ್ಯಾಡಿ ಗ್ರಾಮದ ನಾಲ್ಕೂರು ಎಂಬಲ್ಲಿ ವಾಂತಿ ಮಾಡಿಕೊಂಡ ಯುವಕ ಮೃತಪಟ್ಟಿದ್ದಾರೆ. ಯಡ್ಯಾಡಿ- ಮತ್ಯಾಡಿ ಗ್ರಾಮದ ನಿವಾಸಿ ಶಂಕರ ಅವರ ಪುತ್ರ ಸಂದೇಶ್ (32 ವರ್ಷ) ಮೃತಪಟ್ಟ ಯುವಕ. ನ.22ರಂದು ಮನೆಯಲ್ಲಿರುವ ವೇಳೆ ಬೆಳಗ್ಗೆ 9 ಗಂಟೆಗೆ ಚಹಾ ಕುಡಿದಿದ್ದುನಂತರ ವಾಂತಿ ಮಾಡಿಕೊಂಡು ಅಸ್ವಸ್ಥ ಗೊಂಡಿದ್ದರು. ಚಿಕಿತ್ಸೆಗಾಗಿ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಂದೇಶ್ ಅವರು ಅದಾಗಲೆ ಮೃತ ಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇನುನೊಣ ಕಡಿತದಿಂದ ಮಹಿಳೆ ಸಾವು
ಕುಂದಾಪುರ: ಜೇನುನೊಣ ಕಡಿತದಿಂದ ಮಹಿಳೆ ಸಾವನ್ನಪ್ಪಿದ ಘಟನೆ ಬೈಂದೂರು ವ್ಯಾಪ್ತಿಯಲ್ಲಿ ನಡೆದಿದೆ. ನ.22ರಂದು ಕೆರ್ಗಾಲು ನಿವಾಸಿ ವೆಂಕು (80) ಎಂಬ ವರು ಮೊಮ್ಮಗ ಸುದೀಶ್ ನೊಂದಿಗೆ ನಾಯ್ಕನಕಟ್ಟೆ ಕೃಷ್ಣಮನೆ ಎಂಬಲ್ಲಿ ತೋಟಕ್ಕೆ ಹೋದ ವೇಳೆ ಜೇನುನೊಣದಾಳಿ ನಡೆಸಿತ್ತು. ತೀವ್ರವಾಗಿ ಅಸ್ವಸ್ಥ ಗೊಂಡ ವೆಂಕು ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶನಿವಾರ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಕ್ರಮ ಮರಳು ಸಾಗಾಟ : ಲಾರಿ ವಶ
ಕುಂದಾಪುರ : ಬಗ್ವಾಡಿ ಮಹಿಷು ಮರ್ದಿನಿ ದೇವಸ್ಥಾನದ ಬಳಿ ನೂಜಾಡಿ ರಸ್ತೆಯಲ್ಲಿ ಮರಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪಿಎಸ್‌ಐ ಹರೀಶ್ ಹಾಗೂ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿನಡೆದಿದ್ದು, ಪೊಲೀಸರನ್ನು ನೋಡಿ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿ ಯಾಗಿದ್ದಾನೆ. 7,500 ರೂ. ಮೌಲ್ಯದ 1.5 ಯೂನಿಟ್ ಮರಳು ಸಹಿತ ಟಿಪ್ಪರ್ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.