ಅಯೋಧ್ಯೆ : ಅಯೋಧ್ಯೆಯ ಜನ್ಮಭೂಮಿ ಮಂದಿರದಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆಯಾಗಿ ವರ್ಷ ಸಮೀಪಿಸುತ್ತಿದ್ದು 2025ರ ಜ.11ರಂದು ಪ್ರತಿಷ್ಠಾ ವರ್ಧಂತಿ ಆಚರಿಸಲಾಗುತ್ತದೆ. ಪೌಷ ಶುಕ್ಲ ದ್ವಾದಶಿಯಂದು ಅಂದರೆ ಕೂರ್ಮ ದ್ವಾದಶಿಯಂದು ಆಚರಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ ಜ.22ರಂದು ದ್ವಾದಶಿಯ ಶುಭ ಮುಹೂರ್ತದಲ್ಲಿ ಅತ್ಯಂತ ಮಂಗಳಕರ ಸಮಯದಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆಯ ಪೂಜೆ ನಡೆದಿತ್ತು. ಇದೀಗ ಒಂದು ವರ್ಷ ಪೂರ್ಣಗೊಂಡ ನಂತರ ಆ ಉತ್ಸವವನ್ನು ಮೂರು ದಿನ ಆಚರಣೆ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪದಾಧಿಕಾರಿಗಳು, ಸಂತರು ನಿರ್ಧರಿಸಿದ್ದಾರೆ. ಇದನ್ನು ಐದು ದಿನಗಳವರೆಗೆ ಹೆಚ್ಚಿಸಬಹುದು ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ
ಸೋಮವಾರ ಮಣಿರಾಮ್ ದಾಸ್ ಕಂಟೋನ್ವೆಂಟ್ನಲ್ಲಿ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ದಾಸ್ ಮಹಾರಾಜ್ ಅವರ ಸಮ್ಮುಖದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳನ್ನು ಟ್ರಸ್ಟ್ನ ಸಭೆಯ ಬಳಿಕ ಚಂಪತ್ ರಾಯ್ ಸುದ್ದಿಗಾರರಿಗೆ ವಿವರಿಸಿದರು.