Home » ಕಾರಂತರಿಂದ ಯಕ್ಷಗಾನ ವಿಶ್ವಗಾನವಾಗಿದೆ
 

ಕಾರಂತರಿಂದ ಯಕ್ಷಗಾನ ವಿಶ್ವಗಾನವಾಗಿದೆ

- ಚೇತನ್ ಶೆಟ್ಟಿ

by Kundapur Xpress
Spread the love

ಕೋಟ : ಒಂದು ಕಾಲದಲ್ಲಿ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು ಆದರೆ ನಂತರದ ದಿನಗಳಲ್ಲಿ ಶಿವರಾಮ ಕಾರಂತರ ಮೂಲಕ ಯಕ್ಷಗಾನವು ವಿಶ್ವಗಾನವಾಗಿ ಪಸರಿಸಿಕೊಂಡಿದೆ ಎಂದು ನ್ಯೂ ಕರ್ನಾಟಕ ಬಿಲ್ಡಸ್೯ ಮುಖ್ಯಸ್ಥ ಚೇತನ್ ಶೆಟ್ಟಿ ನುಡಿದರು.
ಅವರು ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲ ವಠಾರದಲ್ಲಿ ಕೋಟ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ವತಿಯಿಂದ ಕಾರ್ತಿಕ ಮಾಸದ ಯಕ್ಷಾರಾಧನೆ ರಂಗದೋಕುಳಿ ಯಕ್ಷದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿ ಯಕ್ಷಗಾನದ ಮೌಲ್ಯಗಳನ್ನು ಇಂದಿನ ಯುವ ಸಮುದಾಯಕ್ಕೆ ಕೊಂಡ್ಯೋಯುವ ಕೆಲಸ ಹವ್ಯಾಸಿ ಸಂಘಗಳಿಂದಾಗಲಿ ಎಂದು ಹಾರೈಸಿದರು

ಕಾರ್ಯಕ್ರಮವನ್ನು ಐರೋಡಿ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಸುಬ್ರಹ್ಮಣ್ಯ ಮಧ್ಯಸ್ಥ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ನ್ಯಾಯವಾದಿ ಟಿ.ಮಂಜುನಾಥ ಗಿಳಿಯಾರು ಮಾತನಾಡಿ ಯಕ್ಷಗಾನದ ಉಳಿವಿನಲ್ಲಿ ಮೇಳಗಳ ಪಾತ್ರ ಎಷ್ಟಿದಯೋ ಅದೇ ರೀತಿ ಹವ್ಯಾಸಿ ಕಲಾವಿದರ ಕೊಡುಗೆ ಕೂಡಾ ಅಷ್ಟೆ ಪ್ರಮಾಣದಲ್ಲಿದೆ ಈ ದಿಸೆಯಲ್ಲಿ ವಿಶ್ವದಾದ್ಯಂತ ಯಕ್ಷಕಲಾರಾಧನೆ ಜನಮನ್ನಣೆ ದೊರೆಯುತ್ತಿದೆ ಅದೇ ರೀತಿ ಯಕ್ಷಸೌರಭ ಯಕ್ಷಗಾನದ ಮೂಲಕ ಕಲಾರಸಿಕರ ಮನಸೂರೆಗೊಳಿಸಿದೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ವಹಿಸಿದ್ದರು.
ಅಭ್ಯಾಗತರಾಗಿ ಕೋಟ ಅಮೃತೇಶ್ವರ ದೇಗುಲದ ಮಾಜಿ ಟ್ರಸ್ಟಿ ಎಂ ಸುಬ್ರಾಯ ಆಚಾರ್,ದೇವಾಡಿಗರ ಸಂಘ ಕೋಟ ಸಾಲಿಗ್ರಾಮ ಅಧ್ಯಕ್ಷ ನರಸಿಂಹ ದೇವಾಡಿಗ,ಕಲಾರಂಗದ ಕಾರ್ಯಾಧ್ಯಕ್ಷ ಹರೀಷ್ ದೇವಾಡಿಗ ಉಪಸ್ಥಿತರಿದ್ದರು. ಸಂಘದ ಸ್ಥಾಪಾಕಾಧ್ಯಕ್ಷ ಹರೀಷ್ ಭಂಡಾರಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಸಂಘದ ಸದಸ್ಯ ರಾಜೇಶ್ ಕರ್ಕೇರ ಕೋಡಿ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ್ ಉರಾಳ್ ವಂದಿಸಿದರು. ಕಾರ್ಯಕ್ರಮದ ನಂತರ ಚಕ್ರವೂಹ್ಯ ಪೌರಾಣಿಕ ಯಕ್ಷಪ್ರಸಂಗ ಪ್ರದರ್ಶನಗೊಂಡಿತು

   

Related Articles

error: Content is protected !!