ಪಟ್ಟಣಂತಿಟ್ಟು : ಕೇರಳದ ಪವಿತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಂಪ್ರದಾಯ ಉಲ್ಲಂಘನೆಯಾಗಿದ್ದು ರಕ್ಷಣೆಗಿದ್ದ ಪೊಲೀಸರೇ ಪವಿತ್ರ 18 ಮೆಟ್ಟಿಲುಗಳಿಗೆ ಅವಮಾನ ಮಾಡಿರುವ ಆರೋಪ ಬಂದಿದೆ. ಕಳೆದ ಶನಿವಾರ ಮೆಟ್ಟಿಲುಗಳ ಮೇಲೆ ನಿಂತು ಫೋಟೋ ತೆಗೆಸಿಕೊಂಡಿರುವ ಪೊಲೀಸರು ದೇಗುಲದ ನಿಯಮಾವಳಿ ಮುರಿದಿದ್ದಾರೆ ಎಂಬ ಆರೋಪ ಬಂದಿದೆ
ಸಾಮಾನ್ಯವಾಗಿ 18 ಪವಿತ್ರ ಮೆಟ್ಟಿಲುಗಳಿಗೆ ಯಾರೂ ಬೆನ್ನು ತೋರಿ ನಿಲ್ಲುವುದಿಲ್ಲ ಆದರೆ ಪೊಲೀಸರು ಬೆನ್ನು ತೋರಿ ನಿಂತು ಫೋಟೋ ತೆಗೆಸಿಕೊಂಡಿದ್ದು ವೈರಲ್ ಆಗಿದೆ. ಈ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತಿರುವ ಕೇರಳ ಪೊಲೀಸ್ ಇಲಾಖೆ ಈ ಸಂಬಂಧ ತನಿಖೆ ನಡೆಸಿ ವರದಿ ಪಡೆಯುವುದಾಗಿ ಹೇಳಿದೆ.
ಸಂಪ್ರದಾಯದ ಪ್ರಕಾರ ಈ ಮೆಟ್ಟಿಲುಗಳನ್ನು ಕೇವಲ ಹತ್ತಲು ಮಾತ್ರ ಬಳಕೆ ಮಾಡಲಾಗುತ್ತದೆ. ಅಲ್ಲದೆ ಈ 18 ಮೆಟ್ಟಿಲುಗಳನ್ನು ಪವಿತ್ರವೆಂದೇ ಪರಿಗಣಿಸಲಾಗಿದ್ದು, ಯಾರೂ ಬೆನ್ನು ತೋರುವುದಿಲ್ಲ ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನದ ಜತೆಗೆ ಈ ಮೆಟ್ಟಿಲುಗಳನ್ನು ಹತ್ತುವುದಕ್ಕಾಗಿಯೇ ತೆರಳುತ್ತಾರೆ