ಕುಂದಾಪುರ : ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲ್ಲೂಕು ಕೋಟತಟ್ಟು ಗ್ರಾಮದ ಪಡುಕೆರೆಯ ಜನನಿ ಕಾಂಪ್ಲೇಕ್ಸ್ ಹತ್ತಿರ ಇರುವ ಮಂಜುನಾಥ ಎಂಬವರ ಮನೆಯ ಹಿಂಭಾಗದಲ್ಲಿ ಸಮುದ್ರದ ಮರಳನ್ನು ಅಕ್ರಮವಾಗಿ ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೋಟ ಪೊಲಿಸ್ ಠಾಣೆಯ ಉಪನಿರೀಕ್ಷಕರಾದ ಸುಧಾ ಪ್ರಭು ತನ್ನ ಸಿಬ್ಬಂಧಿಯವರೊಂದಿಗೆ ಸ್ಥಳಕ್ಕೆ ಹೋದಾಗ ಅಲ್ಲಿ 3 ಟನ್ ಗಳಷ್ಟು ಸಮುದ್ರದ ಮರಳು ತುಂಬಿದ KA-20-AC-4263 ನೇ ನೊಂದಣಿ ನಂಬ್ರದ 407 ಟಿಪ್ಪರ್ ನಿಂತಿದ್ದು ಚಾಲಕನ ಬಳಿ ವಿಚಾರಿಸಿದಾಗ ಪರವಾನಿಗೆ ಇಲ್ಲದೇ ಸಮುದ್ರದ ಮರಳನ್ನು ತೆಗೆದು ಬೇಳೂರು ಗ್ರಾಮದ ಗುಳ್ಳಾಡಿಯಲ್ಲಿರುವ ಮಹೇಂದ್ರ ಹಾಗೂ ಅವರ ಮ್ಯಾನೇಜರ ಪಾಂಡುರಂಗ ತಿಳಿಸಿದಂತೆ ಅವರ ಗುಳ್ಳಾಡಿಯಲ್ಲಿರುವ ಕೋಸ್ಟಲ್ ಮಿನರಲ್ಸ್ ಪ್ಯಾಕ್ಟರಿಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ