ಕುಂದಾಪುರ : ಹೆಗ್ಗುಂಜಿ ರಾಜೀವ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಲಾಡಿ ವಾರ್ಷಿಕ ಪ್ರತಿಭಾ ಪುರಸ್ಕಾರ 2024- 25 ಮತ್ತು ಗಣಕಯಂತ್ರ ವಿಭಾಗ ಇದರ ಉದ್ಘಾಟನಾ ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ನೆರವೇರಿಸಿದರು
ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಶಿಕ್ಷಣ ಸಹಕಾರಿಯಾಗಿದೆ. ಹೀಗಾಗಿ ಎಲ್ಲ ಪೋಷಕರು, ಶಿಕ್ಷಕರು ಕಾಳಜಿ ವಹಿಸಬೇಕು. ಸೀಮಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಇತರೆ ಎಲ್ಲಾ ಸಮುದಾಯದ ಬಡ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಹೆಚ್ಚಾಗಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಶೆಟ್ಟಿ ಚೋರಾಡಿ ಅಧ್ಯಕ್ಷರು ಗ್ರಾಮ ಪಂ. ಹಾಲಾಡಿ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಜನಾರ್ದನ ಸದಸ್ಯರು ಗ್ರಾಮ ಪಂಚಾಯಿತಿ ಹಾಲಾಡಿ ಹಾಗೂ ಉಪಾಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ, ಮಂಜುನಾಥ್ ಕಾಮತ್ ಹಾಲಾಡಿ, ನಿವೃತ್ತ ಬ್ಯಾಂಕ್ ಅಧಿಕಾರಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಗಣೇಶ್ ಕಿಣಿ ಬೆಳ್ವೆ ಉದ್ಯಮಿ, ಬಾಲಕೃಷ್ಣ ಭಟ್.ಕೆ. ಪ್ರಾಂಶುಪಾಲರು, ಹೆ,ರಾ,ಶೆ,ಸ,ಪ, ಪೂ,ಕಾ, ಹಾಲಾಡಿ , ಶ್ರೀಮತಿ ರೋಷನ್ ಬೀಬಿ, ಮುಖ್ಯೋಪಾಧ್ಯರು, ಹೆ,ರಾ,ಶೇ,ಸ, ಪ,ಪೂ,ಕಾ, ಪ್ರೌಢಶಾಲಾ ವಿಭಾಗ, ಹಾಗೂ ವಿದ್ಯಾರ್ಥಿಗಳು ಅಧ್ಯಾಪಕ ವೃಂದದವರು, ಗ್ರಾಮಸ್ಥರು ಉಪಸ್ಥಿತರಿದ್ದರು.