Home » ಇಂದು ಶ್ರೀ ಕುಂದೇಶ್ವರ ಲಕ್ಷ ದೀಪೋತ್ಸವ
 

ಇಂದು ಶ್ರೀ ಕುಂದೇಶ್ವರ ಲಕ್ಷ ದೀಪೋತ್ಸವ

by Kundapur Xpress
Spread the love

ಕುಂದಾಪುರ : ಕರ್ನಾಟಕದ ಕರಾವಳಿ ಭಾಗದಲ್ಲಿ ಹರಿ ಮತ್ತು ಹರ ದೇವಸ್ಥಾನಗಳಿಗೆ ಲೆಕ್ಕವಿಲ್ಲ  ಪುತ್ತೂರಿನ ಅಧಿಪತಿ ಮಹಾಲಿಂಗೇಶ್ವರ ಇದ್ದ ಹಾಗೆ ಉಡುಪಿಯಿಂದ ಕುಂದಾಪುರ ಭಾಗಕ್ಕೆ ಬಂದಾಗ ನಮಗೆ ಈ ಸಿಗುವ ಎರಡು ಪ್ರಸಿದ್ದ ಈಶ್ವರ ದೇವಸ್ಥಾನಗಳು ಒಂದು ಕೋಟೇಶ್ವರದಲ್ಲಿರುವ ಕೋಟಿಲಿಂಗೇಶ್ವರ ಕ್ಷೇತ್ರ ಇನ್ನೊಂದು ಕುಂದಾಪುರದ ಅಧಿಪತಿ ಕುಂದೇಶ್ವರ ಕ್ಷೇತ್ರ

ಉಡುಪಿಯಿಂದ ಕುಂದಾಪುರ ಸ್ವಾಗತ ಮಾಡಿದಾಗಲೇ ಕುಂದಾಪುರ ಪೇಟೆಯ ಮಧ್ಯಭಾಗದಲ್ಲಿರುವುದೇ ಕುಂದೇಶ್ವರ ಕ್ಷೇತ್ರ   ಕುಂದೇಶ್ವರ ಕ್ಷೇತ್ರಕ್ಕೆ ಅನೇಕ ವರ್ಷಗಳ ಇತಿಹಾಸವಿದೆ ಕುಂದಾಪುರಕ್ಕೆ ಹೆಸರು  ಬರಲು ಕಾರಣ ಇಲ್ಲಿಯ ಅಧಿಪತಿಯಾದ ಕುಂದೇಶ್ವರ ಇತಿಹಾಸಗಳ ಪ್ರಕಾರ  ಹತ್ತರಿಂದ ಹನ್ನೊಂದನೇ ಶತಮಾನದ ಕಾಲದ  ದೇವಸ್ಥಾನ  ಕುಂದೇಶ್ವರ  ಕ್ಷೇತ್ರ  ರಾಜ ಕುಂದವರ್ಮನಿಂದ ಈ  ದೇಗುಲ ಪ್ರತಿಷ್ಠಾಪಿಸಲ್ಪಟ್ಟಿತು ಎಂದು ಇತಿಹಾಸಕಾರರು ಹೇಳುತ್ತಾರೆ

ಕುಂದೇಶ್ವರ ಸ್ವಾಮಿ ದೇವಾಲಯದ ವಿಶಿಷ್ಟ ವೈಶಿಷ್ಟ್ಯವೆಂದರೆ ಲಿಂಗವು ಸುಮಾರು ನಾಲ್ಕು ಅಡಿ ಎತ್ತರದಲ್ಲಿದೆ ಮತ್ತು ಸಂಪೂರ್ಣವಾಗಿ ಶುದ್ಧ ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ ಈ ಕಲ್ಲು ವಿಶೇಷ ಗುಣಮಟ್ಟದ್ದಾಗಿದ್ದು ಯಾವುದೇ ಹವಾಮಾನ ಪರಿಸ್ಥಿತಿಗಳಲ್ಲಿ ಒಣಗುವುದಿಲ್ಲ ಇನ್ನೊಂದು ಸುಂದರವಾದ ವೈಶಿಷ್ಟ್ಯವೆಂದರೆ ಇಲ್ಲಿನ ಶಿವಲಿಂಗದಲ್ಲಿ ಲಿಂಗದ ಸಂಪೂರ್ಣ ಎತ್ತರದ ಮೂರನೇ ಒಂದು ಭಾಗದಷ್ಟು ಮಾತ್ರ ಕಾಣಬಹುದಾಗಿದೆ ಏಕೆಂದರೆ ಮೂರನೇ ಎರಡರಷ್ಟು ಭಾಗ ಭೂಮಿಯೊಳಗೆ ಉಳಿದಿದೆ ಇದು ಈ ದೇವಾಲಯದ ವಿಶೇಷ ಸಂಕೇತವಾಗಿದೆ. ದೇವಸ್ಥಾನದಲ್ಲಿನ ವಿಗ್ರಹವನ್ನು ರುದ್ರಾಕ್ಷಿ ಶಿಲೆಯಿಂದ ಮಾಡಲಾಗಿದೆ

ಕುಂದೇಶ್ವರ ದೇವಸ್ಥಾನದಲ್ಲಿ ನಡೆಸುವ ಪ್ರಮುಖ ಹಬ್ಬವೆಂದರೆ ಕುಂದೇಶ್ವರ ದೀಪೋತ್ಸವ ದೀಪೋತ್ಸವವನ್ನು ನೋಡಲು ಎರಡು ಕಣ್ಣು ಸಾಲದು ಇಡೀ ಸ್ವರ್ಗವೇ ಧರೆಗಿಳಿದು ಬಂದಂತೆ ಅನಿಸುತ್ತದೆ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಸಹಸ್ರ ಸಹಸ್ರ ಭಕ್ತಾದಿಗಳು ಸೇರುವಂತಹ ಈ ಹಬ್ಬ  ಕುಂದಾಪುರ ಜನರ ಪಾಲಿಗೆ ಒಂದು ಸಂಭ್ರಮವೇ ಸರಿ ಕುಂದೇಶ್ವರ ಹಬ್ಬದಂದು ಶಿವನೇ ಕೈಲಾಸದಿಂದ ಧರೆಗಿಳಿದು ಬಂದಂತೆ   ಭಾಸವಾಗುತ್ತದೆ ಇಂದು ನವೆಂಬರ್‌ 30  ಕುಂದೇಶ್ವರ ದೀಪೋತ್ಸವವನ್ನು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

 

Related Articles

error: Content is protected !!