ಕಟಪಾಡಿ : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜುಗಳ ಅಂತರ್ ವಲಯ ಮಟ್ಟದ ಪುರುಷರ ವಾಲೀಬಾಲ್ ಪಂದ್ಯಾಟವು 3 ದಿನಗಳ ಕಾಲ ನಡೆಯಿತು.
ಈ ಪಂದ್ಯಾಟದಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜು ಚಾಂಪಿಯನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ರನ್ನರ್ ಅಪ್ ಟ್ರೋಫಿಯನ್ನು ಕುದ್ರೋಳಿಯ ನಾರಾಯಣ್ ಗುರು ಕಾಲೇಜು ಹಾಗೂ ದ್ವಿತೀಯ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ತೃತೀಯ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದಿರೆಯ ವಿದ್ಯಾರ್ಥಿಗಳು ಪಡೆದುಕೊಂಡರು.
ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ರವರು ಸೋಲುಗಳಿಗೆ ಶರಣಾದರೆ ಗೆಲವು ಎಂದೂ ನಮ್ಮ ಬಳಿ ಸುಳಿಯುವುದಿಲ್ಲ ಸತತ ಪರಿಶ್ರಮವೇ ಗೆಲುವಿನ ಗುಟ್ಟು ಹಾಗಾಗಿ ಜೀವನದಲ್ಲಿ ಪ್ರಯತ್ನ ಪಡುತ್ತಲೇ ಸಾಗಬೇಕು ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಎಸ್ .ವಿ .ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರು ಸತ್ಯೇಂದ್ರ ಪೈ ರವರು ಕ್ರೀಡೆಗಳಿಂದ ನಮ್ಮ ಬದುಕಿನ ದಿಕ್ಕುಗಳು ಬದಲಾಗುತ್ತವೆ. ಪ್ರತಿದಿನದ ಅಭ್ಯಾಸವೇ ಗೆಲುವನ್ನು ನಮ್ಮ ಬಳಿಗೆ ತಲುಪಿಸುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು. ವೇದಿಕೆಯಲ್ಲಿ ಮಂಗಳೂರು ವಿವಿ ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಕೇಶವ ಮೂರ್ತಿ ಮತ್ತು ಡಾ. ಡೆರೆಲ್ಡ್ ಸಂತೋಷ್ ಡಿ ಸೋಜಾ, ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಸದಸ್ಯರು, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಘ್ನೇಶ್ ಶೆಣೈ , ತ್ರಿಶಾ ವಿದ್ಯಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಶಶಿಕಿರಣ್ ಉಪಸ್ಥಿತರಿದ್ದರು.