ಕೋಟ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರು ನಡೆಸಿದ ಜಿಲ್ಲಾಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಹಿತ್ಯ ಮತ್ತು ಸಾಂಸ್ಕöÈತಿಕ ಸ್ಪರ್ಧೆಗಳಲ್ಲಿ ಕೋಟ ವಿವೇಕ ಪದವಿ ಪೂರ್ವ[ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀರಕ್ಷಾ, ಏಕ ಪಾತ್ರ ಅಭಿನಯದಲ್ಲಿ ಪ್ರಥಮ, ಕನ್ನಡಪ್ರಬಂಧ ಸ್ಪರ್ಧೆಯಲ್ಲಿ ಶೃತಿ ಬಿ ಎಸ್ ಪ್ರಥಮ, ಚಿತ್ರಕಲೆ ಶರಧಿ ದ್ವಿತೀಯ, ಕನ್ನಡ ಭಾಷಣದಲ್ಲಿ ಅಭಿರಾಮ್ ದ್ವಿತೀಯ, ಜನಪದ ಗೀತೆಯಲ್ಲಿ ನಯನ ವೈ ಎಸ್ ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ಸಹನ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.