Home » ಆರೆಸ್ಸೆಸ್ ಸರಸಂಘ ಚಾಲಕ್ ದ.ಕ.ಕ್ಕೆ ಭೇಟಿ
 

ಆರೆಸ್ಸೆಸ್ ಸರಸಂಘ ಚಾಲಕ್ ದ.ಕ.ಕ್ಕೆ ಭೇಟಿ

ಡಿ.6 ರಿಂದ

by Kundapur Xpress
Spread the love

ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘ ಚಾಲಕ ಡಾ.ಮೋಹನ್ ಭಾಗವತ್ ಅವರ ಕರ್ನಾಟಕ ಪ್ರಾಂತ ಪ್ರವಾಸ ಈ ಬಾರಿ ಕರಾವಳಿ ಜಿಲ್ಲೆಗೆ ಆಯೋಜನೆಗೊಂಡಿದೆ. ಡಾ.ಮೋಹನ್ ಭಾಗವತ್ ಅವರು ಡಿ.6 ರಿಂದ 11ರ ವರೆಗೆ ದ.ಕ.ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಡಿ.6 ರಂದು ಸಂಜೆ ಮಂಗಳೂರಿಗೆ ಆಗಮಿಸಲಿದ್ದಾರೆ. ಡಿ.7 ರಂದು ಸಂಜೆ 5.30ಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಸಂಘದ ಶಾಖೆಗೆ ಭೇಟಿ, ಬೌದ್ಧಿಕ್ ವರ್ಗ, ವಿವಿಧ ಬೈಠಕ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಿ.11ರಂದು ಸರಸಂಘಚಾಲಕರು ನಿರ್ಗಮಿಸಲಿದ್ದಾರೆ. ಕಲ್ಲಡ್ಕದಲ್ಲಿ ಕ್ರೀಡೋತ್ಸವ ಹೊರತು ಪಡಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಇರುವುದಿಲ್ಲ, ಉಳಿದಂತೆ ಎಲ್ಲ ಕಾರ್ಯಕ್ರಮಗಳೂ ಖಾಸಗಿಯಾಗಿ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ

 

Related Articles

error: Content is protected !!