ಕುಂದಾಪುರ : ಕುಂದಾಪುರ ತಾಲೋಕಿನ ಬೆಳ್ವೆ ಎಂಬಲ್ಲಿ ಸ್ನಾನಕ್ಕೆಂದು ಹೋದ ಇಬ್ಬರು ಬಾಲಕರು ಕಾಲು ಜಾರಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಭಾನುವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಬೆಳ್ವೆ ನಿವಾಸಿ ಶ್ರೀಧರ ಆಚಾರ್ಯ ಅವರ ಪುತ್ರ ಶ್ರೀಶ ಆಚಾರ್ಯ (14ವರ್ಷ),ಹಾಗೂ ರಾಮ ನಾಯ್ಕ್ ಅವರ ಪುತ್ರ ಜಯಂತ್ ನಾಯ್ಕ್ (19ವರ್ಷ) ಎಂದು ತಿಳಿದು ಬಂದಿದೆ
ಇವರು ಇಬ್ಬರು ಸ್ನೇಹಿತರಾಗಿದ್ದು ಸ್ಥಾನಕ್ಕೆಂದು ಗುಮ್ಮಾಲ ಬಳಿ ಇರುವ ಸೀತಾನದಿಗೆ ತೆರಳಿದ್ದರು ಇವರು ಕಾಲುಜಾರಿ ನದಿಗೆ ಬಿದ್ದ ತಕ್ಷಣ ಜೊತೆಗಿದ್ದ ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಸ್ಥಳೀಯರಾದ ನಾಗರಾಜ ಹಾಗೂ ಚೋಣ ಎಂಬವರು ನದಿಗೆ ಹಾರಿ ಇಬ್ಬರು ಬಾಲಕರನ್ನು ನದಿಯಿಂದ ಮೇಲಕ್ಕೆ ಎತ್ತಿ ತಂದಿದ್ದಾರೆ. ಆದರೆ ಅಷ್ಟರಲ್ಲೇ ಇಬ್ಬರು ಬಾಲಕರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಶಂಕರನಾರಾಯಣ ಎಸ್ ಐ ನಾಸಿರ್ ಹುಸೇನ್, ಎಸ್ಐ ಶಂಭುಲಿಂಗ ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸ್ಥಳಕ್ಕಾಗಮಿಸಿದ್ದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ವೆ ಶವಗಾರಕ್ಕೆ ಸಾಗಿಸಲಾಗಿದೆ.